ರಾಜ್ಯದಲ್ಲಿ 5.52 ಕೋಟಿ ಮತದಾರರು; ಅಂತಿಮ ಮತದಾರರ ಪಟ್ಟಿ ಪ್ರಕಟ|5.52 crore voters

eci voting
Published on

ಬೆಂಗಳೂರು: ರಾಜ್ಯದ ಮತದಾರರ ಅಂತಿಮ ಮತದಾರರ ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿ ಕಚೇರಿ ಪ್ರಕಟಿಸಿದೆ.

ರಾಜ್ಯದಲ್ಲಿ 2,75,62,634 ಪುರುಷ, 2,76,40,836 ಮಹಿಳಾ ಮತ್ತು 5,095 ಇತರೆ ಮತದಾರರು ಸೇರಿದಂತೆ 5,52,08,565 ಮತದಾರರಿದ್ದಾರೆ(5.52 crore voters in the state) . 2025ರ ಕರಡು ಪಟ್ಟಿಗೆ ಹೋಲಿಸಿದರೆ 1,03,783 ಮತದಾರರ ನಿವ್ವಳ ಹೆಚ್ಚಳವಾಗಿದೆ.

ಯುವ ಮತದಾರರ ಸಂಖ್ಯೆ ಕರಡು ಪಟ್ಟಿಯಲ್ಲಿ 6,81,197 ಇದ್ದುದು, ಅಂತಿಮ ಪರಿಷ್ಕರಣೆಯಲ್ಲಿ 8,02,423ಕ್ಕೆ ಏರಿಕೆಯಾಗಿದೆ. ಇದು 1,21,226 ಯುವ ಮತದಾರರ ಗಮನಾರ್ಹ ಏರಿಕೆಯನ್ನು ಸೂಚಿಸಿದೆ.

ಅಂತಿಮ ಪಟ್ಟಿ ಪ್ರಕಾರ 2,77,616 ಪುರುಷ, 3,58,930 ,ಮಹಿಳಾ ಹಾಗೂ 5 ಇತರೆ ಮತದಾರರು 85 ವರ್ಷ ಮೇಲ್ಪಟ್ಟವರಾಗಿದ್ದಾರೆ. 8,747 ಪುರುಷ, 13,804 ಮಹಿಳಾ ಮತದಾರರು 100ಕ್ಕೂ ಹೆಚ್ಚು ವಯಸ್ಸಿನವರಿದ್ದಾರೆ.

ಒಟ್ಟು 6,28,554 ದಿವ್ಯಾಂಗ ಮತದಾರರಿದ್ದಾರೆ. ಅಂತಿಮ ಮತದಾರರ ಪಟ್ಟಿಯ ಪ್ರಕಾರ ಸರಾಸರಿ ಒಂದು ಮತದಾನ ಕೇಂದ್ರಕ್ಕೆ 937 ಮತದಾರರಂತೆ ಒಟ್ಟು 58,932 ಮತಗಟ್ಟೆಗಳಿವೆ. ಅಂತಿಮ ಮತದಾರರ ಪಟ್ಟಿ 2024 ರಿಂದ 2025ರ ಅಂತಿಮ ಪಟ್ಟಿ ವೇಳೆಗೆ 29,84,125 ಸೇರ್ಪಡೆ, 7,04,339 ಅಳಿಸುವಿಕೆ ಹಾಗೂ 12,92,271 ಮಾರ್ಪಾಡುಗಳನ್ನು ಮಾಡಲಾಗಿದೆ.

ಮತದಾರರ ಪಟ್ಟಿಗೆ ಸಂಬಂದಿಸಿದಂತೆ ಯಾವುದೇ ಮಾಹಿತಿಗಾಗಿ ಸಾರ್ವಜನಿಕರು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ವೆಬ್ ಸೈಟ್( (https://ceo.karnataka.gov.in/e) ಮೂಲಕ ಮತದಾರರ ೆಟೋ ಗುರುತಿನ ಚೀಟಿ ಮತ್ತು ಅರ್ಜಿ ಸಲ್ಲಿಸಬಹುದಾಗಿದೆ. ಅಥವಾ ಸಂಬಂಧಿಸಿದ ಆಯಾ ಚುನಾವಣಾ ನೋಂದಣಾಧಿಕಾರಿಗಳು/ಸಹಾಯಕ ಚುನಾವಣಾ ನೋಂದಣಾಧಿಕಾರಿಗಳು/ಬೂತ್ ಮಟ್ಟದ ಅಧಿಕಾರಿಗಳನ್ನು ಸಂರ್ಕಿಸಬಹುದು. ಮತದಾರರು ಹೆಚ್ಚಿನ ಮಾಹಿತಿಗೆ ಟೋಲ್ ಫ್ರೀ ಸಂಖ್ಯೆ 1950(180042551950) ಅನ್ನು ಸಹ ಸಂಪರ್ಕಿಸುವಂತೆ ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net