

ನವದೆಹಲಿ: ದೇಶದ 7,287 ಕುಗ್ರಾಮಗಳಿಗೆ 4ಜಿ ಮೊಬೈಲ್ ಆಧಾರಿತ ಯುಎಸ್ಒಎಫ್ ಯೋಜನೆಯನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.
ಆಂಧ್ರಪ್ರದೇಶ, ಛತ್ತೀಸ್ಗಢ, ಜಾರ್ಖಂಡ್, ಮಹಾರಾಷ್ಟ್ರ ಮತ್ತು ಒಡಿಶಾಗಳ 44 ಜಿಲ್ಲೆಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ. ಇದಕ್ಕಾಗಿ ಮುಂದಿನ ಐದು ವರ್ಷ 6,466 ಕೋಟಿ ರೂಪಾಯಿಯನ್ನು ಸಾರ್ವತ್ರಿಕ ಸೇವಾ ಬಾಧ್ಯತಾ ನಿಧಿ (ಯುಎಸ್ಒಎಫ್)ಯಲ್ಲಿ ಮೀಸಲು ಇರಿಸಲು ಒಪ್ಪಿಗೆ ಸೂಚಿಸಿದೆ. ಈ ಯೋಜನೆಯು 18 ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಈ ಒಪ್ಪಂದಕ್ಕೆ ನ.23ಕ್ಕೆ ಸಹಿ ಬೀಳುವ ಸಾಧ್ಯತೆ ಇದೆ.
4ಜಿ ನೆಟ್ವರ್ಕ್ ಲಭ್ಯವಾಗುವುದರಿಂದ ಈ ಜಿಲ್ಲೆಗಳಲ್ಲಿ ಕೌಶಲ ಆಧಾರಿತ ತರಬೇತಿ ಕಾರ್ಯಕ್ರಮ, ವಿಪತ್ತು ನಿರ್ವಹಣೆ, ಇ-ಆಡಳಿತ, ಇ-ಕಾಮರ್ಸ್ ಸೌಲಭ್ಯ ಹೆಚ್ಚಳ, ಶಿಕ್ಷಣ ಸಂಸ್ಥೆಗಳಿಗೆ ಜ್ಞಾನ ಹಂಚಿಕೆ, ಉದ್ಯೋಗ ಸೃಷ್ಟಿಗೆ ಅನುಕೂಲ ಆಗಲಿದೆ. ಒಟ್ಟಾರೆ ಆತ್ಮನಿರ್ಭರ ಭಾರತದ ಕಾರ್ಯಕ್ರಮಗಳಿಗೆ ಇದು ಪೂರಕವಾಗಿರಲಿದೆ.