44,658 ಹೊಸ ಕರೊನಾ ಪ್ರಕರಣ ದಾಖಲು

Corona
Published on

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 44,658 ಹೊಸ ಕರೊನಾ ಪ್ರಕರಣಗಳು ವರದಿಯಾಗಿದ್ದು, ಇವುಗಳಲ್ಲಿ 30,007 ಪ್ರಕರಣಗಳು ಕೇರಳ ರಾಜ್ಯದಿಂದಲೇ ವರದಿಯಾಗಿವೆ. ದೇಶದಲ್ಲಿ ಹಾಲಿ, 3,44,899 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ 32,988 ಜನ ಸೋಂಕಿತರು ಗುಣಮುಖರಾಗಿದ್ದರೆ, 496 ಜನರು ಕರೊನಾದಿಂದಾಗಿ ಸಾವಪ್ಪಿದ್ದಾರೆ. ಭಾರತದಲ್ಲಿ ಈವರೆಗೆ 4,36,861 ಜನ ಕರೊನಾಗೆ ಬಲಿಯಾಗಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net