ಪೊಲೀಸ್​ ಬಿಗಿ ಭದ್ರತೆ ನಡುವೆ ನಡೆಯುತ್ತಿದೆ ದೆಹಲಿ ವಿಧಾನಸಭಾ ಚುನಾವಣೆ; ಮಧ್ಯಾಹ್ನ4ರ ಹೊತ್ತಿಗೆ ಶೇ.42.20 ಮತದಾನ

Pranab Mukharji 8 Feb 20
Published on

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಾಹ್ನ 4 ಗಂಟೆ ಹೊತ್ತಿಗೆ ಶೇ.42.20ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಈಗಾಗಲೇ ಹಲವು ಪ್ರಮುಖ ನಾಯಕರು ತಮ್ಮ ಮತ ಚಲಾಯಿಸಿದ್ದಾರೆ. ಮಧ್ಯಾಹ್ನ ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ, ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಅವರ ಪುತ್ರ ಮತ್ತಿತರ ಮುಖಂಡರು ವೋಟ್​ ಮಾಡಿದ್ದಾರೆ.

ದೆಹಲಿಯಾದ್ಯಂತ ಬಿಗಿ ಭದ್ರತೆಯ ನಡುವೆ ಚುನಾವಣೆ ನಡೆಯುತ್ತಿದೆ. ಅದರಲ್ಲೂ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ನಡೆಯುತ್ತಿರುವ ಶಾಹೀನ್​ ಬಾಗ್​ ನ ಬೂತ್​ನಲ್ಲಿ ವಿಶೇಷ ಭದ್ರತೆ ವಹಿಸಲಾಗಿದೆ.

ದೆಹಲಿಯಾದ್ಯಂತ 40,000 ಪೊಲೀಸ್​ ಸಿಬ್ಬಂದಿ, 19,000 ಹೋಂಗಾರ್ಡ್ಸ್​ ಹಾಗೂ 190 ಕಂಪನಿ ಪ್ಯಾರಾಮಿಲಿಟರಿ ಪಡೆಗಳನ್ನು ನಿಯೋಜಿಸಲಾಗಿದೆ.

ಯಮುನಾ ನದಿಯಲ್ಲಿ ಪೊಲೀಸ್ ದೋಣಿಗಳು ಗಸ್ತು ತಿರುಗುತ್ತಿವೆ. ಫ್ಲೈಯಿಂಗ್​ ಸ್ಕ್ವಾಡ್​ಗಳೂ ಕಾರ್ಯನಿರ್ವಹಿಸುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net