41 ಸಾವಿರ ರೂ. ದಂಡ

Published on

ಹುಬ್ಬಳ್ಳಿ: ತಾಲೂಕಿನ ಕಿರೇಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡ ನರೇಗಾ ಕಾಮಗಾರಿಯಲ್ಲಿ ಮೃತ ಮಹಿಳೆಯೊಬ್ಬರು ಕಾರ್ಯನಿರ್ವಹಿಸಿದ್ದಾರೆ ಎಂದು ಅವರ ಫೋಟೋವನ್ನು ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಿರುವ ಪಿಡಿಒ ಹಾಗೂ ಮೇಟ್ ಸಿಬ್ಬಂದಿಗೆ ಒಂಬುಡ್ಸಮನ್ ತಲಾ 41 ಸಾವಿರ ರೂ. ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ವಿ. ಮತ್ತು ಮೇಟ್ ನೌಕರ ಪ್ರಭು ಮಂಗೂಣಿ ಅವರು, ವರ್ಷದ ಹಿಂದೆ ಮೃತ ಮಹಿಳೆ ಯಲ್ಲವ್ವ ಕಣಕಣ್ಣವರ ಅವರ ಫೋಟೋವನ್ನು ಕಣ್ತಪ್ಪಿನಿಂದ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಿದ್ದರು. ಆದರೆ, ಅವರ ಹೆಸರಲ್ಲಿ ಉದ್ಯೋಗ ಸೃಜನೆಯಾಗಿಲ್ಲ. ದೂರಿನ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಸರ್ಕಾರದ ಸುತ್ತೋಲೆ ಪಾಲಿಸುವಲ್ಲಿ ವಿಫಲರಾಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ದಂಡ ವಿಧಿಸಿ, ಎಚ್ಚರಿಕೆ ನೀಡಿರುವುದಾಗಿ ಉದ್ಯೋಗ ಖಾತ್ರಿ ಯೋಜನೆಯ ಜಿಲ್ಲಾ ಒಂಬುಡ್ಸಮನ್ ಮಹಾರುದ್ರಪ್ಪ ಇಚ್ಚಂಗಿ ಆದೇಶದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net