

ನವದೆಹಲಿ: ಈ ವರ್ಷದ ರಕ್ಷಾಬಂಧನ ಹಬ್ಬಕ್ಕೆ ಸ್ವದೇಶಿ ರಾಖಿಗಳ ಮಾರಾಟ ಹೆಚ್ಚಾಗಿದ್ದು, ಚೀನಾ ತಯಾರಿಸಿ ರುವ ರಾಖಿಯನ್ನು ಜನರು ನಿರಾಕರಿಸಿದ್ದಾರೆ. ಹೀಗಾಗಿ ಚೀನಾಕ್ಕೆ -ಠಿ; 4 ಸಾವಿರ ಕೋಟಿ ನಷ್ಟವಾಗಿದೆ ಎಂದು ಅಖಿಲ ಭಾರತೀಯ ವರ್ತಕರ ಒಕ್ಕೂಟ (ಸಿಎಐಟಿ) ಹೇಳಿದೆ. ಸ್ವದೇಶಿ ನಿರ್ವಿುತ ರಾಖಿಯನ್ನೇ ಬಳಸಿ, ಮಹಿಳೆಯರು ರಾಖಿ ತಯಾರಿಕೆಯಲ್ಲಿ ತೊಡಗಿಸಿಕೊಳ್ಳಿ ಎಂದು ಜೂನ್ 10ರಂದು ಸಿಎಐಟಿ ಕರೆ ನೀಡಿತ್ತು. ಸಿಎಐಟಿ ಸಹಯೋಗದೊಂದಿಗೆ 1 ಕೋಟಿಗೂ ಹೆಚ್ಚು ರಾಖಿಯನ್ನು ತಯಾರಿಸಲಾಗಿದೆ. ಕಳೆದ ಕೆಲ ವರ್ಷಗಳಲ್ಲಿ ಮಾರಾಟವಾದ
6 ಸಾವಿರ ಕೋಟಿ ರಾಖಿಯಲ್ಲಿ 4 ಸಾವಿರ ಕೋಟಿ ರಾಖಿಗಳು ಚೀನಾದಲ್ಲಿ ತಯಾರಿಸಿದ್ದಾಗಿತ್ತು. ಆದರೆ ಈ ವರ್ಷ ಚೀನಾದ ರಾಖಿಗೆ ಭಾರೀ ಹಿನ್ನಡೆ ಉಂಟಾಗಿದೆ ಎಂದು ಸಿಎಐಟಿ ತಿಳಿಸಿದೆ. ಚೀನಾ ವಸ್ತುಗಳನ್ನು ನಿಷೇಧಿಸುವ ನಿಟ್ಟಿನಲ್ಲಿ ಆಗಸ್ಟ್ 9ರಂದು ಚೀನಾ ಕ್ವಿಟ್ ಇಂಡಿಯಾ ಆಂದೋಲನ ನಡೆಸುವುದಾಗಿ ಸಿಎಐಟಿ ತಿಳಿಸಿದೆ. ಆ ದಿನದಂದು ದೇಶದ 800ಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ಘೊಷಣೆ ಕೂಗಲಾಗುವುದು ಎನ್ನಲಾಗಿದೆ.