

ಚಂಡೀಗಢ: ನಾವು ನೋಡಿರುವಂತೆ ಸಾಮಾನ್ಯವಾಗಿ ಲಾರಿಯೊಂದಕ್ಕೆ 16 ರಿಂದ 20 ಟೈರುಗಳು ಇರುವುದನ್ನು ನೋಡಿದ್ದೇವೆ. ಆದರೆ, ನೀವು ಎಂದಾದರು 400 ಟೈರ್ ಇರುವ ಲಾರಿಯನ್ನು (TrucK) ನೋಡಿದ್ದೀರಾ. ಅದು ಕೂಡ ಭಾರತದಲ್ಲಿ ಎಂದರೆ ನೀವು ನಂಬುತ್ತೀರಾ. ಆಶ್ಚರ್ಯವೆನಿಸಿದರು ಇದು ನಿಜ. ಈ ಲಾರಿ ಹರಿಯಾಣದ ಸಿರ್ಸಾದಲ್ಲಿ ಕಂಡು ಬಂದಿದ್ದು, ಇದು ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.
ಹರಿಯಾಣದ ಸಿರ್ಸಾದ ನರ್ವಾನಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತಾತ್ಕಾಲಿಕ ಸೇತುವೆಯನ್ನು ಈ ಲಾರಿ (Truck) ಯಶಸ್ವಿಯಾಗಿ ದಾಟಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗುಜರಾತ್ನಿಂದ ಕಾಂಡ್ಲಾದಿಂದ ಪಾಣಿಪತ್ಗೆ ಸಾಗಿಸುವ ವೇಳೆ ಸಿರ್ಸಾದ ಬಳಿ ಕಂಡು ಬಂದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
400 ಟೈರ್ ಇರುವ ಟ್ರೈಲರ್ಅನ್ನು ಎಳೆಯಲು 500 ಎಚ್ಪಿ ಇರುವ ಸುಮಾರು ಏಳು ಲಾರಿಗಳನ್ನು (Truck) ನಿಯೋಜಿಸಲಾಗಿದ್ದು, ನರ್ವಾನಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತಾತ್ಕಾಲಿಕ ಸೇತುವೆಯನ್ನು ಯಶಸ್ವಿಯಾಗಿ ದಾಟಲಾಗಿದೆ. ಗುಜರಾತ್ನಿಂದ ಬೃಹತ್ ಬಾಯ್ಲರ್ ಸೇರಿದಂತೆ ಸುಮಾರು 800 ಟನ್ ತೂಕವನ್ನು ಸಾಗಿಸಲಾಗುತ್ತಿತ್ತು. ಇದನ್ನು ನೋಡಿರುವ ಜನರು ಟ್ರಕ್ನ (Truck) ಫೋಟೋ ಹಾಗೂ ವಿಡಿಯೋವನ್ನು ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಈ ಕುರಿತು ಮಾತನಾಡಿರುವ ಲಾಜಿಸ್ಟಿಕ್ ಕಂಪನಿಯ ಅಧಿಕಾರಿಯೊಬ್ಬರು, ಪ್ರತಿನಿತ್ಯ 15-20 ಕಿಲೋಮೀಟರ್ ಕ್ರಮಿಸಲಾಗುತ್ತದೆ. ಒಟ್ಟು 250 ಮಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಗುಜರಾತ್ನ ಕಾಂಡ್ಲಾದಿಂದ ಪಾಣಿಪತ್ಗೆ ಬಾಯ್ಲರ್ಅನ್ನು ಸಾಗಿಸಲಾಗುತ್ತಿದೆ. ಇದಲ್ಲದೆ ಈ ಲಾರಿಗಳನ್ನು (Truck) ವಿಮಾನದ ರೆಕ್ಕೆ ಹಾಗೂ ವಿಂಡ್ಮಿಲ್ಗಳನ್ನು ಸ್ಥಳಾಂತಿರಸಲು ಬಳಸಲಾಗುತ್ತದೆ ಎಂದು ಲಾಜಿಸ್ಟಿಕ್ ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.