ಎಚ್.ಡಿ.ಕೋಟೆ ತಾಲೂಕಿಗೆ 400 ಕೋಟಿ ರೂ. ಅನುದಾನ

07 HDK02
ಎಚ್.ಡಿ.ಕೋಟೆ ಪಟ್ಟಣದ ತಾಲೂಕು ಆಡಳಿತ ಭವನದ ಆವರಣದಲ್ಲಿ ಕಟ್ಟಡ ಹಾಗೂ ಕೂಲಿ ಕಾರ್ಮಿಕರ ಮಕ್ಕಳಿಗೆ ಕಾರ್ಮಿಕ ಇಲಾಖೆ ವತಿಯಿಂದ ಉಚಿತವಾಗಿ ಲ್ಯಾಪ್‌ಟಾಪ್ ಅನ್ನು ಅನಿಲ್ ಚಿಕ್ಕಮಾದು ವಿತರಣೆ ಮಾಡಿದರು.
Published on

ಎಚ್.ಡಿ.ಕೊಟೆ: ಪ್ರಸ್ತುತ ಸಾಲಿನಲ್ಲಿ ಮುಖ್ಯಮಂತ್ರಿಗಳ ಮೂಲಕ ತಾಲೂಕಿಗೆ 400 ಕೋಟಿ ರೂ. ಅನುದಾನ ತರಲಾಗಿದೆ ಎಂದು ಜಂಗಲ್ ಲಾಡ್ಜಸ್ ಅ್ಯಂಡ್ ರೆಸಾರ್ಟ್ಸ್ ನಿಗಮದ ಅಧ್ಯಕ್ಷ ಹಾಗೂ ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

ಎಚ್.ಡಿ. ಕೋಟೆ ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ಗುರುವಾರ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ ಮತ್ತು ಕಾರ್ಮಿಕ ಇಲಾಖೆಯಿಂದ ಸರಗೂರು ಮತ್ತು ಎಚ್.ಡಿ. ಕೋಟೆಯ ಕಾರ್ಮಿಕರ 79 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಐದು ವರ್ಷಗಳ ಅವಧಿಯಲ್ಲಿ ತಾಲೂಕಿನ ಅಭಿವೃದ್ಧಿಗೆ ಶ್ರನಿಸಿದ್ದೆ. ಅದೇ ರೀತಿ ಪ್ರಸ್ತುತ ಸಾಲಿನಲ್ಲಿ ಅಭಿವೃದ್ಧಿಗೆ ಪಣ ತೊಡುವುದಾಗಿ ತಿಳಿಸಿದರು. ಮಹಿಳೆಯರು ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು, ಸರ್ಕಾರದ ಶಕ್ತಿ ಯೋಜನೆಯ ಪ್ರಯೋಜನವನ್ನೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಜೀತ ವಿಮುಕ್ತಿ ಹೊಂದಿದ 12 ಜನರಿಗೆ ಬಿಡುಗಡೆ ಪತ್ರವನ್ನು ನೀಡಲಾಯಿತು. ಹುಣಸೂರು ಉಪವಿಭಾಗಧಿಕಾರಿ ಹ್ಯಾರಿಸ್ ಮಹಮ್ಮದ್ ಸುಮೈರ್, ತಹಸೀಲ್ದಾರ್ ಶ್ರೀನಿವಾಸ್, ಕಾರ್ಮಿಕ ಇಲಾಖೆಯ ಜಿಲ್ಲಾ ಕಾರ್ಮಿಕ ಅಧಿಕಾರಿ ರಾಜೇಶ್ ಜಾದವ್, ಹಿರಿಯ ಕಾರ್ಮಿಕ ನಿರೀಕ್ಷಿಕ ಶಶಿಧರ್, ನಿರೀಕ್ಷಿಕ ಚಂದ್ರು ಮತ್ತು ಡಿಇಒಗಳಾದ ಪರಶಿವಮೂರ್ತಿ, ಸರಿತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net