ತ್ವರಿತ ಪ್ರಯಾಣಕ್ಕೆ ತದ್ರೂಪಿ ರೈಲುಗಳು, ಇಂದಿನಿಂದಲೇ 40 ರೈಲು ಸಂಚಾರ..

train
Published on

ನವದೆಹಲಿ: ಗಮ್ಯವನ್ನು ಬೇಗ ತಲುಪಬೇಕು ಎಂಬ ಪ್ರಯಾಣಿಕರಿಗೆ ಹಾಗೂ ಅತಿಹೆಚ್ಚು ಪ್ರಯಾಣಿಕರ ಒತ್ತಡ ಇರುವ ಮಾರ್ಗಗಳಲ್ಲಿ ಕ್ಷಿಪ್ರ ಪ್ರಯಾಣಕ್ಕೆ ವ್ಯವಸ್ಥೆ ಮಾಡಿಕೊಡುವ ಸಲುವಾಗಿ ಭಾರತೀಯ ರೈಲ್ವೇ ಸೋಮವಾರ 40 ತದ್ರೂಪಿ (ಕ್ಲೋನ್​) ರೈಲುಗಳನ್ನು ಹಳಿಗಿಳಿಸಿದೆ.

ಈ ಕ್ಲೋನ್​ ಟ್ರೇನ್​ಗಳು 3-AC ರೈಲುಗಳಾಗಿದ್ದು, ಪೇರೆಂಟ್​ ಟ್ರೇನ್​ಗಿಂತ ಕಡಿಮೆ ನಿಲುಗಡೆ, ಹೆಚ್ಚು ವೇಗ ಹೊಂದಿರಲಿದ್ದು, ಪೇರೆಂಟ್​ ಟ್ರೇನ್​ಗಿಂತ ಮೊದಲೇ ಹೊರಡಲಿವೆ. ಪರಿಣಾಮ, ಪ್ರಯಾಣಿಕರು ಮೂಲ ರೈಲಿಗಿಂತ 2-3 ಗಂಟೆ ಮೊದಲೇ ಗಮ್ಯವನ್ನು ತಲುಪಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕರ್ನಾಟಕ, ದೆಹಲಿ, ಆಂಧ್ರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶಗಳ ಅತಿಹೆಚ್ಚಿನ ಬೇಡಿಕೆಯ ಮಾರ್ಗಗಳಲ್ಲಿ ಈ ಕ್ಲೋನ್​ ಟ್ರೇನ್​ಗಳನ್ನು ಬಿಡಲಾಗಿದೆ. ಈ ರೈಲುಗಳಿಗೆ 10 ದಿನಗಳ ಮೊದಲು ರಿಸರ್ವೇಷನ್​ ಮಾಡಬಹುದಾಗಿದ್ದು, ಸೆ. 19ರ ಬೆಳಗ್ಗೆ 8ರಿಂದಲೇ ಬುಕಿಂಗ್ ಆರಂಭಗೊಂಡಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net