

ಕಾರು ಕಾಲುವೆಗೆ ಬಿದ್ದು, ಒಂದೇ ಕುಟುಂಬದ ನಾಲ್ವರು ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ನಡೆದಿದೆ. ಸಾರಿಗೆ ಉದ್ಯಮಿ ಸಾಧು ರಾಮ್ (56), ಅವರ ಪತ್ನಿ ಸೀಮಾ (46) ಪುತ್ರರಾದ ಮಾಂಟಿ (17) ಮತ್ತು ಧ್ರುವ್ (15) ಮೃತರು.
ಸಾಧು ರಾಮ್ ಕಾರು ಚಲಾಯಿಸುತ್ತಿದ್ದರು. ಇವರು ದೆಹಲಿಯ ಮೆಹ್ರೌಲಿಯಿಂದ ತಮ್ಮ ಊರಾದ ಸೋನಿಪತ್ ಜಿಲ್ಲೆಯ ಗರ್ಹಿ ಬಿಂದ್ರೌಲಿ ಗ್ರಾಮಕ್ಕೆ ತೆರಳುತ್ತಿದ್ದರು. ಆದರೆ ನಹ್ರಾ ಗ್ರಾಮದ ಬಳಿ ಕಾರು ಸ್ಕಿಡ್ ಆಗಿದೆ. ಆಯತಪ್ಪಿ ಪಕ್ಕದ ಕಾಲುವೆಗೆ ಬಿದ್ದು, ನಾಲ್ವರೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಧು ರಾಮು ಅವರು ಮೆಹ್ರೌಲಿಯಲ್ಲಿ ಸಾರಿಗೆ ಉದ್ಯಮ ನಡೆಸುತ್ತಿದ್ದರು. ಅಲ್ಲಿಂದ ತಮ್ಮ ಸ್ವಂತ ಊರಿಗೆ ಇಂದು ಹೋಗುತ್ತಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)