ರೈಲಿನಲ್ಲಿ 4 ಹತ್ಯೆ.. 19ರ ಯುವತಿ ಮೇಲೆ ಅತ್ಯಾಚಾರ-ಕೊಲೆ ಮಾಡಿದ್ದ ಸರಣಿ ಹಂತಕ ಕೊನೆಗೂ ಅರೆಸ್ಟ್​ | Serial Killer

Serial killer
Published on

ಗುಜರಾತ್​: ಕರ್ನಾಟಕ ಸೇರಿ ಇತರೆ 4 ರಾಜ್ಯಗಳಲ್ಲಿನ ರೈಲುಗಳಲ್ಲಿ 4 ಕೊಲೆ ಮಾಡಿದ್ದ ಮತ್ತು 19 ವರ್ಷದ ಯುವತಿ ಮೇಲೆ ರೇಪ್​ ಆ್ಯಂಡ್​ ಮರ್ಡರ್​ ಆರೋಪದ ಮೇಲೆ ಸರಣಿ ಹಂತಕನ್ನು(Serial Killer) ಗುಜರಾತ್​ ಪೊಲೀಸರು ಇತ್ತೀಚಿಗೆ ಬಂಧಿಸಿದ್ದಾರೆ.

ಹರಿಯಾಣದ ರೋಹ್ಟರ್​ನ ರಾಹುಲ್​ ಸಿಂಗ್ ಜಾಟ್​(29) ಬಂಧಿತ ವ್ಯಕ್ತಿ. ಇದೇ ನವಂಬರ್​ ಆರಂಭದಲ್ಲಿ ವಲ್ಸಾದನ ರೈಲ್ವೆ ಹಳಿಗಳ ಬಳಿ 19 ವರ್ಷದ ಯುವತಿ ಮೇಲೆ ಅತ್ಯಾಚಾರ-ಕೊಲೆ ಆರೋಪದ ಮೇಲೆ ಸ್ಥಳೀಯ ಮತ್ತು ರೈಲ್ವೆ ಪೊಲೀಸರ ಜಂಟಿ ಕಾರ್ಯಚಾರಣೆಯಲ್ಲಿ ಬಂಧಿಸಲಾಗಿತ್ತು.

ತನಿಖೆ ಸಮಯದಲ್ಲಿ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದರಿಂದ ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ತೆಲಂಗಾಣದ ರೈಲುಗಳಲ್ಲಿ ಒಂದು ಅತ್ಯಾಚಾರ ಸೇರಿದಂತೆ ನಾಲ್ಕು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ವಲ್ಸಾದನ ರೈಲ್ವೆ ಬಳಿ ಅತ್ಯಾಚಾರ ನಡೆಯುವ ಎರಡು ದಿನಗಳ ಅಂತರದಲ್ಲಿ ತೆಲಂಗಾಣದಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದ ಸಂಗತಿಯ ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ.

''ಸಂತ್ರಸ್ತೆ ಟ್ಯೂಷನ್​ನಿಂದ ಸಂಜೆ ಮನೆಗೆ ತೆರಳುತ್ತಿದ್ದ ವೇಳೆ ಆರೋಪಿ ಜಾಟ್​ ಏಕಾಏಕಿ ಯುವತಿಯ ಮೇಲೆ ಹಲ್ಲೆ ಮಾಡಿ. ಅತ್ಯಾಚಾರ ಎಸಗಿದ್ದಾನೆ. ವಿಷಯ ಯಾರಿಗೂ ತಿಳಿಯಬಾರದು ಎಂಬ ಉದ್ದೇಶದಿಂದ ಕತ್ತು ಹಿಸುಕಿ ಕೊಲೆ ಮಾಡಿ ಎಸ್ಕೇಪ್​ ಆಗಿದ್ದಾನೆ. ಇತನು ಸ್ಥಳದಲ್ಲಿ ಬಿಟ್ಟಿದ್ದ ಕೆಲ ಸಾಕ್ಷಿಗಳ ಆಧಾರದ ಮೇಲೆ ಬಂಧಿಸಲಾಗಿದೆ'' ಎಂದು ಎಸ್ಪಿ ಕರಂರಾಜ್​ ವಘೇಲಾ ತಿಳಿಸಿದ್ದಾರೆ.

ಜಾಟ್​ 5ನೇ ತರಗತಿ ಓದಿದ್ದು, ಬಾಲ್ಯದಿಂದಲೂ ಮತ್ತು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದನು. ಅಲ್ಲದೆ, ರಾಜಸ್ಥಾನ, ಹರಿಯಾಣ,ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಟ್ರಕ್​ ಕಳ್ಳತನ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣಿಕೆ ಸಂಬಂಧಿಸಿದ ಪ್ರಕರಣಗಳಲ್ಲಿ 2018-19 ರಿಂದ 2024 ರವರೆಗೆ ಜೈಲಿಗಟ್ಟಲಾತ್ತು. ಇತ್ತೀಚಿಗೆ ಹೊರ ಬಂದ ಬಳಿಕ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ ಎಂದು ಎಸ್ಪಿ ತಿಳಿಸಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net