

ಆಂಧ್ರಪ್ರದೇಶ: ಇಲ್ಲಿನ ಕೊಡವಲೂರು ಮಂಡಲದದಲ್ಲಿ ಮಂಗಳವಾರ ತಡರಾತ್ರಿ ತೃತೀಯಲಿಂಗಿ ಸಮುದಾಯದ ನಾಯಕಿಯೊಬ್ಬರನ್ನು ಬರ್ಬರವಾಗಿ ಕೊಲೆ(Murder) ಮಾಡಲಾಗಿದೆ ಎಂದು ವರದಿಯಾಗಿದೆ.
ಹತ್ಯೆಯಾಗಿರುವ ತೃತೀಯಲಿಂಗಿ ಹಾಸಿನಿ ಎಂದು ಗುರುತಿಸಲಾಗಿದೆ. ನೆಲ್ಲೂರು ಸರ್ಕಾರಿ ಜನರಲ್ ಆಸ್ಪತ್ರೆಗೆ ಆಕೆಯ ಶವ ತರುವಾಗ ಭಾರಿ ಜನಸಂದಣಿ ಜಮಾಯಿಸಿತ್ತು. ಆಂಧ್ರ ನೆಲ್ಲೂರು ಸೇರಿದಂತೆ ತಮಿಳುನಾಡು ವಿವಿಧ ಭಾಗಗಳಿಂದ ತೃತೀಯಲಿಂಗಿಯ ಸಮುದಾಯದವರು ಆಸ್ಪತ್ರೆ ಮುಂದೆ ಧಾವಿಸಿದ್ದು, ಕೊಲೆಗೆ ನ್ಯಾಯ ಒದಗಿಸುವಂತೆ ಭಾರೀ ಪ್ರತಿಭಟನೆ ಮಾಡಲಾಗಿದೆ.ಪ್ರಸ್ತುತ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಲಾಗಿದೆ.
ಈ ಹಿನ್ನೆಯಲ್ಲಿ ಸ್ಥಳೀಯ ಪೊಲೀಸರು ಪ್ರತಿಭಟನೆಯನ್ನು ಹತ್ತಿಕ್ಕಲು ಬಂದೋಬಸ್ತ್ ಏರ್ಪಡಿಸಿದ್ದಾರೆ. ಇನ್ನು ತೃತೀಯಲಿಂಗಿ ಬಣದಲ್ಲಿನ ಅಧಿಕಾರಕ್ಕಾಗಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಶೀಘ್ರವೇ ಕೊಲೆಗಾರರನ್ನು ಬಂಧಿಸಲಾಗುವುದು. ಹಾಸಿನಿ ಅವರ ಮೃತ ದೇಹವನ್ನು ಅವರ ಹುಟ್ಟೂರು ತಿರುಪತಿ ಮಂಗಳಂಗೆ ಸಾಗಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.(ಏಜೆನ್ಸೀಸ್)