

ಮುಂಬೈ: ಆರ್ಪಿಎಫ್ ಕಾನ್ಸ್ಟೆಬಲ್ನೊಬ್ಬ ಚಲಿಸುತ್ತಿದ್ದ ರೈಲಿನಲ್ಲಿ ಗುಂಡಿನ ದಾಳಿ ನಡೆಸಿದ ಪರಿಣಾಮ ನಾಲ್ವರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.
ಇದನ್ನೂ ಓದಿ: ಬಳ್ಳಾರಿಯ ಗಣಿಯಲ್ಲಿ ಅವೈಜ್ಞಾನಿಕ ಸ್ಫೋಟ; ಮಂಜಿನ ರೀತಿ ತುಂಬಿದ ಧೂಳು…
ಘಟನೆಯಲ್ಲಿ ಎಎಸ್ಐ ಟಿಕಾ ರಾಮ್ ಮೀನಾ ಮತ್ತು ಮೂವರು ಮೃತಪಟ್ಟಿದ್ದು, ಪ್ರಯಾಣಿಕರ ಗುರುತು ಇನ್ನು ಪತ್ತೆಯಾಗಿಲ್ಲ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಆರ್ಪಿಎಫ್ ಕಾನ್ಸ್ಟೆಬಲ್ ಚೇತನ್ ಎಂಬಾತನನ್ನು ಬಂಧಿಸಲಾಗಿದೆ.
ಈ ಘಟನೆಯು ಜೈಪುರ-ಮುಂಬೈ ಎಕ್ಸ್ಪ್ರೆಸ್ ರೈಲಿನಲ್ಲಿ ಸೋಮವಾರದಂದು ಬೆಳಿಗ್ಗೆ 5.23ರ ಸುಮಾರಿಗೆ ಜರುಗಿದ್ದು, ರೈಲು ಜೈಪುರದಿಂದ ಮುಂಬೈಗೆ ತೆರಳುತ್ತಿತ್ತು. ಆರೋಪಿಯು ಎಸ್ಕಾರ್ಟ್ ಇನ್ಚಾರ್ಜ್ ಎಎಸ್ಐ ಟಿಕಾ ರಾಮ್ ಮೀನಾ ಮೇಲೆ ಎಂಬುವರ ಮೇಲೆ ಗುಂಡು ಹಾರಿಸಿ ಅನಂತರ ಮತ್ತೊಂದು ಬೋಗಿಗೆ ಹೋಗಿ ಮೂವರು ಪ್ರಯಾಣಿಕರನ್ನು ಗುಂಡಿಕ್ಕಿ ಕೊಂದಿದ್ದಾನೆ.
ಕೃತ್ಯವನ್ನು ಎಸಗಿದ ನಂತರ ಆರೋಪಿಯು ದಹಿಸರ್ ಪ್ರದೇಶದ ಬಳಿ ಚೈನ್ ಎಳೆದು, ರೈಲ್ವೆಯಿಂದ ಇಳಿದು ಪರಾರಿಯಾಗಲು ಪ್ರಯತ್ನಿಸಿದ್ದಾನೆ ಆದರೆ ಮುಂಬೈ ಆರ್ಪಿಎಫ್ ಸಿಬ್ಬಂದಿ ಆತನು ಕೃತ್ಯಕ್ಕೆ ಬಳಸಿದ ಶಸ್ತ್ರಾಸ್ತ್ರ ಸಹಿತ ಆತನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್)