ಚಲಿಸುತ್ತಿದ್ದ ರೈಲಿನಿಂದ ಬೇರ್ಪಟ್ಟ ನಾಲ್ಕು ಬೋಗಿಗಳು; ಗಾಬರಿಯಾದ ಪ್ರಯಾಣಿಕರು

Train
Published on

ತಮಿಳುನಾಡು: ಚಲಿಸುತ್ತಿದ್ದ ರೈಲಿನ ನಾಲ್ಕು ಬೋಗಿಗಳು ಬೇರ್ಪಟ್ಟಿರುವ ಘಟನೆ ಸೈದಾಪೇಟ್ ಎಂಬಲ್ಲಿ ನಡೆದಿದೆ. ಘಟನೆಯಿಂದ ಬೋಗಿಯಲ್ಲಿದ್ದ ಪ್ರಯಾಣಿಕರು ಒಂದು ಕ್ಷಣ ಗಾಬರಿಗೊಳಗಾಗಿದ್ದಾರೆ. ಅವಘಡದಿಂದಾಗಿ ಚೆನ್ನೈ ಬೀಚ್ ಮತ್ತು ತಾಂಬರಂ-ಚೆಂಗಲಪಟ್ಟು ನಡುವಿನ ರೈಲು ಸೇವೆಯಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ವ್ಯತ್ಯಯ ಉಂಟಾಗಿದೆ ಎಂದು ವರದಿಯಾಗಿದೆ.

ಬೆಳಗ್ಗೆ 5 ಗಂಟೆಗೆ ಬೀಚ್ ನಿಲ್ದಾಣದಿಂದ ಹೊರಟ ರೈಲು ಚೆಂಗಲ್ಪಟ್ಟು ಕಡೆಗೆ ಹೋಗುತ್ತಿತ್ತು. ಈ ವೇಳೆ ಅವಘಡ ಸಂಭವಿಸಿದೆ. ಸೈದಾಪೇಟ್ ರೈಲು ನಿಲ್ದಾಣದಲ್ಲಿ ರೈಲು ತನ್ನ ವೇಗ ಹೆಚ್ಚಿಸುವ ಸಂದರ್ಭದಲ್ಲಿ ಹಿಂದಿನ ನಾಲ್ಕು ಬೋಗಿಗಳು ಕೋಚ್​ನಿಂದ ಬೇರ್ಪಟ್ಟಿವೆ. ಘಟನೆಯಿಂದ ಎಗ್ಮೋರ್ ಮತ್ತು ಚೆಂಗಲ್ಪಟ್ಟು ನಡುವಿನ ಎಲ್ಲಾ ಇತರ ಇಎಂಯು ಉಪನಗರ ರೈಲುಗಳು ಸ್ಥಗಿತಗೊಂಡಿವೆ.

ಘಟನೆ ಸಂಭವಿಸುತ್ತಿದ್ದಂತೆ ನಿರ್ವಹಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ಬಳಿಕ ಬೇರ್ಪಟ್ಟಿರುವ ಬೋಗಿಗಳನ್ನು ಲೊಕೊಮೊಟಿವ್ ವರ್ಕ್‌ಶಾಪ್‌ಗೆ ಸ್ಥಳಾಂತರಿಸಲಾಗಿದೆ. ಈ ಬಗ್ಗೆ ರೈಲ್ವೆ ಅಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net