

Railway Flyover: ರೈಲ್ವೇ ಮೇಲ್ಸೆತುವೆ ನಿರ್ಮಾಣ ಯೋಜನೆಗಾಗಿ ಅಗೆದಿದ್ದ ದೊಡ್ಡ ನೀರಿನ ಗುಂಡಿಯಲ್ಲಿ ನಾಲ್ವರು ಅಪ್ರಾಪ್ತ ಬಾಲಕರು ಬಿದ್ದು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ದರ್ವಾ ಪಟ್ಟಣದಲ್ಲಿ ನಡೆದಿದೆ.
ರೆಹಾನ್ ಅಸ್ಲಾಂ ಖಾನ್ (13), ಗೋಲು ಪಾಂಡುರಂಗ್ ನರ್ನವಾರೆ (10), ಸೌಮ್ಯ ಸತೀಶ್ ಖಾಡ್ಸನ್ (10) ಮತ್ತು ವೈಭವ್ ಆಶಿಶ್ ಬೋಧ್ಲೆ (14) ಮೃತ ಬಾಲಕರು ಎಂದು ತಿಳಿದುಬಂದಿದೆ. ಇವರು ಆಟವಾಡಲು ಈ ಗುಂಡಿ ಬಳಿ ಹೋಗಿದ್ದು, ಉತ್ಸಾಹದಿಂದ ಆ ಗುಂಡಿಯೊಳಗೆ ಹಾರಿದ್ದಾರೆ. ಗುಂಡಿ ಆಳ ಇದ್ದುದರಿಂದ ಮೇಲೆ ಬರಲು ಸಾಧ್ಯವಾಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತಯೇ ಸ್ಥಳಕ್ಕೆ ಆಗಮಿಸಿದ, ಸ್ಥಳೀಯರು ಈ ಬಾಲಕರನ್ನು ಹೊಂಡದಿಂದ ಹೊರ ತೆಗೆಯಲು ಪ್ರಯತ್ನಿಸಿ, ಮೇಲೆತ್ತಿಕೊಂಡು ಪ್ರಾಥಮಿಕ ಚಿಕಿತ್ಸೆಗಾಗಿ ಹತ್ತಿರದಲ್ಲಿರುವ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಬಾಲಕರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದಾಗ್ಯೂ, ನಾಲ್ವರು ಬಾಲಕರು ಮೃತ ಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. (ಏಜೆನ್ಸೀಸ್)