

Property Dispute: 46 ವರ್ಷದ ವ್ಯಕ್ತಿಯೊಬ್ಬನಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಹಿನ್ನಲೆ, ನಾಲ್ವರ ವಿರುದ್ಧ ಮುಂಬೈನ ಅಂದೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ರಮೇಶ್ ಗುಪ್ತಾ ಅಂದೇರಿಯ ಜೋಗೇಶ್ವರಿ ನಿವಾಸಿ ಎಂದು ತಿಳಿದುಬಂದಿದೆ. ಇವರು ಅಂದೇರಿಯ ರೈಲು ಹಳಿಗಳ ಮೇಲೆ ಮಲಗಿದ್ದು, ಸ್ಥಳೀಯ ರೈಲು ಅವರ ಮೇಲೆ ಡಿಕ್ಕಿ ಹೊಡೆದ ಪರಿಣಾಮ ಆತ ಮೃತಪಟ್ಟಿದ್ದಾರೆ. ಇನ್ನು ಮಾಹಿತಿ ಪಡೆದ ರೈಲ್ವೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಮೃತ ದೇಹವನ್ನು ಆಸ್ಪತ್ರೆಗೆ ರವಾನಿಸಿದ್ದೇವೆ. ಈ ವೇಳೆ ಸಾವಿಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ.
ಘಟನೆ ಕಳೆದ ಕೆಲವು ದಿನಗಳ ನಂತರ, ಗುಪ್ತಾ ಅವರು ತನ್ನ 12 ವರ್ಷದ ಮಗಳ ನೋಟ್ ಬುಕ್ನಲ್ಲಿ ಆತ್ಮಹತ್ಯೆಗೆ ಕಾರಣವನ್ನು ಬರೆದಿದ್ದರು. ಅದನ್ನು ನೋಡಿದ ಮಗಳು ತನ್ನ ತಾಯಿಗೆ ತೋರಿಸಿದ್ದಾಳೆ. ಈ ವೇಳೆ ಆಸ್ತಿ ವಿವಾದದ ವಿಚಾರದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರದಲ್ಲಿ ಬರೆಯಲಾಗಿತ್ತು.
ಗುಪ್ತಾ ಅವರು ಸ್ವಲ್ಪ ಜಾಗವನ್ನು ಹೊಂದಿದ್ದರು. ಆದರೆ, ದಂಪತಿ ಹಾಗೂ ಇಬ್ಬರು ವ್ಯಕ್ತಿಗಳು ಆ ಜಾಗದ ನಿಜವಾದ ಮಲೀಕರು ನಾವು ಎಂದು ಪ್ರತಿನಿತ್ಯ ಹಿಂಸೆ ಮಾಡುತ್ತಿದ್ದರು. ಹಾಗೆಯೇ, ಆಗ್ಗಾಗೆ ಆತನಿಂದ ಹಣವನ್ನು ಕೇಳುತ್ತಿದ್ದರು. ದಂಪತಿಯ ನಿರಂತರ ಬೇಡಿಕೆಗಳು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿವೆ ಎಂದು ಗುಪ್ತಾ ಪತ್ರದಲ್ಲಿ ಉಲ್ಲೇಖಿಸಿದ್ದರು.
ಗುಪ್ತಾ ಅವರ ಹೆಂಡತಿ ಅಂದೇರಿ ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಅಧಿಕಾರಿಗಳು ಗುಪ್ತಾ ಅವರಿಗೆ ತೊಂದರೆ ನೀಡಿದ ನಾಲ್ಕು ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಸನ್ 108 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು 3(5) (ಸಾಮಾನ್ಯ ವಿವರಣೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ತನಿಖೆಗೆ ಬರುವಂತೆ ಹೇಳಿದ್ದಾರೆ. (ಏಜೆನ್ಸೀಸ್)