

ಬೆಟ್ಟದಪುರ: ಇಲ್ಲಿನ ಸುಣ್ಣದಕೇರಿ ಹಾಲು ಉತ್ಪಾದಕರ ಸಹಕಾರ ಸಂಘವು 4,33,133 ರೂ. ನಿವ್ವಳ ಲಾಭ ಗಳಿಸಿದೆ ಎಂದು ಮೈಮುಲ್ ವಿಸ್ತರಣಾಧಿಕಾರಿ ಸತೀಶ್ ಮಾಹಿತಿ ನೀಡಿದರು.
ಭಾನುವಾರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಉತ್ಪಾದಕರ ಸಹಕಾರ ಇದಕ್ಕೆ ಮೂಲ ಕಾರಣವಾಗಿದೆ. ಮುಂದಿನ ದಿನಗಳಲ್ಲೂ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಮೈಮುಲ್ ವಿಸ್ತರಣಾಧಿಕಾರಿ ಅವಿನಾಶ್, ಸಂಘದ ಅಧ್ಯಕ್ಷ ರಾಮು, ಉಪಾಧ್ಯಕ್ಷ ಬಿ.ಎನ್ ಮಹೇಶ್, ಬಿ.ಎಸ್. ರಾಮಲಿಂಗೇಗೌಡ, ಬಿ.ಪಿ ನಟೇಶ್, ಬಿ.ಜಿ ವೆಂಕಟೇಶ್, ಬಿ.ಕೆ ಮಹಾದೇವ, ಬಿ.ವಿ ರವಿ, ಬಿ.ಎನ್ ಕುಮಾರ, ಎಂ.ಕಾವೇರಿ, ಅಕ್ಕಯ್ಯಮ್ಮ, ಸುಬ್ಬನಾರಾಯಣಿ, ತಿಮ್ಮಪ್ಪನಾಯಕ, ಕಾರ್ಯದರ್ಶಿ ಬಿ.ಎಂ ಮಂಜು, ಸಿಬ್ಬಂದಿ ಅಭಿಲಾಷ್, ಸಚಿನ್ ಇತರರು ಇದ್ದರು.