ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಮಗಳಿಗೆ 366ನೇ ರ‍್ಯಾಂಕ್: ಪಬ್ಲಿಕ್ ಸರ್ವೀಸ್‌ಗೆ 4ನೇ ತಲೆಮಾರು ಎಂಟ್ರಿ, ತಂದೆ, ತಾತ ಏನಾಗಿದ್ದರು? ಇಲ್ಲಿದೆ ಮಾಹಿತಿ

Rakesh singh Daughter
Published on

ಬೆಂಗಳೂರು: ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರ ಮಗಳು ಸಂಸ್ಕೃತಿ ಸಿಂಗ್ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ 366ನೇ ರ‌್ಯಾಂಕ್ ಪಡೆದಿದ್ದಾರೆ. ಈ ಮೂಲಕ ರಾಕೇಶ್‌ಸಿಂಗ್ ಕುಟುಂಬದ 4ನೇ ತಲೆಮಾರು ಪಬ್ಲಿಕ್ ಸರ್ವೀಸ್‌ಗೆ ಪ್ರವೇಶ ಪಡೆದಿದೆ.

ರಾಕೇಶ್ ಸಿಂಗ್ ಅವರ ತಾತ ಐಎಎಸ್, ತಂದೆ ಐಪಿಎಸ್, ರಾಕೇಶ್ ಸಿಂಗ್ ಅವರು ಐಎಎಸ್, ಅವರ ಅಳಿಯ ಕೂಡ ಈಗಾಗಲೇ ಐಆರ್‌ಎಸ್ ಸೇವೆಯಲ್ಲಿದ್ದಾರೆ. ಈಗ ಅವರ ಮಗಳು ಕೂಡ ಯುಪಿಎಸ್ಸಿ ಪರೀಕ್ಷೆಯನ್ನು 2ನೇ ಪ್ರಯತ್ನದಲ್ಲಿ ತೇರ್ಗಡೆ ಹೊಂದಿದ್ದು, 366ನೇ ರ‌್ಯಾಂಕ್ ಪಡೆದಿದ್ದಾರೆ. ದೆಹಲಿಯಲ್ಲಿ ಪರೀಕ್ಷೆ ಬರೆದಿದ್ದು, ಐಎಎಸ್ ಆಗುವ ಅವರ ಪ್ರಯತ್ನ ಮುಂದುವರಿಯಲಿದೆ ಎಂದು ರಾಕೇಶ್ ಸಿಂಗ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net