36,565 ಹಿರಿಯ ನಾಗರಿಕರು, ವಿಶೇಷಚೇತನರು ಮನೆಯಿಂದ ಮತದಾನ

EVM
Published on

ಬೆಂಗಳೂರು: ರಾಜ್ಯದಲ್ಲಿ ಸೋಮವಾರ 7056 ಮಂದಿ 85 ವರ್ಷ ಮೇಲ್ಪಟ್ಟ ಹಾಗೂ 2346 ಮಂದಿ ವಿಶೇಷ ಚೇತನ ಮನೆಯಿಂದ ಮತದಾನ ಮಾಡಿದ್ದಾರೆ.

ಇದುವರೆಗೆ 85 ವರ್ಷ ಮೇಲ್ಪಟ್ಟ 27,505 ಮತದಾರರು ಹಾಗೂ 9,060 ವಿಶೇಷಚೇತನ ಮತದಾರರು ಮತ ಚಲಾಯಿಸಿದ್ದಾರೆ.

85 ವರ್ಷ ಮೇಲ್ಪಟ್ಟ 36,689 ಹಾಗೂ 11,920 ದಿವ್ಯಾಂಗ ಮತದಾರರು ಮನೆಯಿಂದ ಮತದಾನ ಮಾಡಲು ಆಯ್ಕೆ ಮಾಡಿಕೊಂಡಿದ್ದರು.

ಮನೆಯಿಂದ ಮತದಾನ ಮಾಡುವ ಪ್ರಕ್ರಿಯೆ ಏ.18ರವರೆಗೆ ನಡೆಯಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net