351 ಶಾಲಾ ವಾಹನ ಚಾಲಕರ ಮೇಲೆ ಕೇಸ್

Traffic Police
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಸಿದ ಶಾಲಾ ವಾಹನಗಳ 351 ಚಾಲಕರ ವಿರುದ್ಧ ಸಂಚಾರ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಶುಕ್ರವಾರ ಬೆಳಗ್ಗೆ 7.30ರಿಂದ 9.30ರವರೆಗೆ ನಗರದೆಲ್ಲೆಡೆ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ 3,395 ವಾಹನಗಳ ತಪಾಸಣೆ ನಡೆಸಿದ್ದಾರೆ.

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದ 24 ಚಾಲಕರು ಮತ್ತು ಹೆಚ್ಚುವರಿ ಶಾಲಾಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ 327 ಚಾಲಕರ ವಿರುದ್ಧ ಕೇಸ್ ದಾಖಲಿಸಿ 65,400 ರೂ. ದಂಡ ವಿಧಿಸಿದ್ದಾರೆ. ಡ್ರಂಕ್ ಆ್ಯಂಡ್ ಡ್ರೈವ್ ದಂಡವನ್ನು ಕೋರ್ಟ್‌ನಲ್ಲಿ ಪಾವತಿಸುವಂತೆ ಸೂಚಿಸಿದ್ದಾರೆ. ಮತ್ತೆ ಬೆಳಗ್ಗೆ 11ರಿಂದ ಸಂಜೆ 4 ಗಂಟೆವರೆಗೂ ಸಂಚಾರ ನಿಯಮ ಉಲ್ಲಂಸಿದ ಚಾಲಕ/ಸವಾರರ ವಿರುದ್ಧ ಕಾರ್ಯಾಚರಣೆ ನಡೆಸಿದ್ದಾರೆ.

ಪ್ರವೇಶ ನಿಷಿದ್ಧ, ಏಕಮುಖ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಚಾಹನ ಚಾಲನೆ, ತ್ರಿಬಲ್ ರೈಡಿಂಗ್, ನೋ ಪಾರ್ಕಿಂಗ್, ುಟ್‌ಪಾತ್ ಪಾರ್ಕಿಂಗ್, ಹೆಲ್ಮೆಟ್‌ರಹಿತ ಚಾಲನೆ ಸೇರಿ 1,757 ಕೇಸ್ ದಾಖಲಿಸಿ 88.60 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net