35 ಕೋಟಿ ರೂ. ಮೌಲ್ಯದ ಅಪರೂಪದ ವಿಗ್ರಹಗಳ ವಶ; ವಿಗ್ರಹಗಳ ವಿಶೇಷತೆ ಕೇಳಿದ್ರೆ ಶಾಕ್​!

dk (10) (1)
Published on

ತಮಿಳುನಾಡು: ಇಲ್ಲಿನ ಕಾಡಿಯಂಕುಪ್ಪದಲ್ಲಿ ತಿರುವಣ್ಣಮಲೈ ಪೊಲೀಸರ ತಂಡದೊಂದಿಗೆ ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ ಅಧಿಕಾರಿಗಳ ತಂಡ ಎರಡು ಅಪರೂಪ ವಿಗ್ರಹಗಳನ್ನು ವಶಕ್ಕೆ ಪಡೆದಿದ್ದಾರೆ.

ನವಪಾಶನ ವಿಗ್ರಹ(ಒಂಬತ್ತು ಗಿಡ ಮೂಲಿಕೆ ಮತ್ತು ಖನಿಜಗಳಿಂದ ಮಾಡಲ್ಪಟ್ಟ ಮುರುಗನ್​ ವಿಗ್ರಹ) ಮತ್ತು ಆನೆದಂತದಿಂದ ಕೆತ್ತಿದ ಕೃಷ್ಣನ ಮೂರ್ತಿಯನ್ನು ವಶ ಪಡಿಸಿಕೊಂಡಿದ್ದಾರೆ. ಎರಡು ವಿಗ್ರಹಗಳ ಬೆಲೆ ಬರೊಬ್ಬರಿ 35 ಕೋಟಿ ರೂ. ಎಂದು ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಂಕಿತ ಆರೋಪಿಗಳಾದ ರಾಜಶೇಖರನ್​ ಮತ್ತು ವೆಂಕಟೇಶನ್​ ಬಂಧಿಸಲಾಗಿದೆ. ಆನೆದಂತ ಆಧಾರಿತ ಕಲಾಕೃತಿಗಳ ಕಳ್ಳ ಸಾಗಣಿಕೆ ಮೇಲೆ ನಿಗಾವಹಿಸಿದ್ದ ತಂಡ ಡಿ.22ರಂದು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.

ಇನ್ನು ವಶಪಡಿಸಿಕೊಂಡ ವಿಗ್ರಹಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಜಿಲ್ಲಾ ಅರಣ್ಯ ಇಲಾಖೆಗೆ ಕಳುಹಿಸಿದ್ದಾರೆ. ಎರಡು ವಿಗ್ರಹಗಳ ಪೈಕಿ ನವಪಾಶನ ವಿಗ್ರಹ ಇನ್ನು ಅಧಿಕ ಬೆಲೆ ಬಾಳುತ್ತದೆ ಎಂದು ಅಧಿಕಾರಿಗಳ ಹೇಳಿದ್ದಾರೆ. ಬೆಂಗಳೂರು ಗ್ಯಾಂಗ್​ಗೆ ಈ ವಿಗ್ರಹಗಳನ್ನು ಸಾಗಿಸಲು ಪ್ಲಾನ್​ ಮಾಡುತ್ತಿದ್ದರು. ಈ ಸಂಪೂರ್ಣ ಜಾಲವನ್ನು ಕಿತ್ತು ಹಾಕಲು ಹೆಚ್ಚಿನ ತನಿಖೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net