

Earthquake : ನೇಪಾಳ-ಟಿಬೆಟ್ ಗಡಿಯಲ್ಲಿ ಇಂದು ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದಾಗಿ ಟಿಬೆಟ್‌ನಲ್ಲಿ ಸುಮಾರು 32 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸುಮಾರು 38 ಮಂದಿ ಗಾಯಗೊಂಡಿದ್ದಾರೆ. ಮೃತರ ಮತ್ತು ಗಾಯಾಳುಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಟಿಬೆಟ್ ಪ್ರಸ್ತುತ ಚೀನಾದ ನಿಯಂತ್ರಣದಲ್ಲಿದೆ. ಟಿಬೆಟ್ ಪಶ್ಚಿಮ ಚೀನಾದ ಭಾಗ ಎಂದು ಚೀನಾ ಹೇಳಿಕೊಂಡಿದೆ. ಪಶ್ಚಿಮ ಚೀನಾದ ಪರ್ವತ ಪ್ರದೇಶದಲ್ಲಿ ಪ್ರಬಲ ಭೂಕಂಪ (Earthquake ) ಸಂಭವಿಸಿದೆ ಎಂದು ಚೀನಾದ ಸುದ್ದಿ ಸಂಸ್ಥೆ ಈ ಲೇಖನದಲ್ಲಿ ಉಲ್ಲೇಖಿಸಿದೆ.
ಟಿಬೆಟ್‌ನ ರಾಜಧಾನಿ ಲಾಸಾದಿಂದ ಸುಮಾರು 380 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಲೋಬುಚೆ ಪಟ್ಟಣದಲ್ಲಿ ಭೂಕಂಪದ ಕೇಂದ್ರಬಿಂದು. ಭೂಕಂಪನದ ಸುತ್ತಲಿನ ಪ್ರದೇಶವು ಸಮುದ್ರ ಮಟ್ಟದಿಂದ ಸರಾಸರಿ 4,200 ಮೀಟರ್ ಎತ್ತರದಲ್ಲಿದೆ. ಈ ಭೂಕಂಪದ ತೀವ್ರತೆ 7.1 ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ವರದಿ ಮಾಡಿದೆ. ಒಟ್ಟಾರೆಯಾಗಿ, ಟಿಬೆಟ್‌ನಲ್ಲಿ ಈ ಭೂಕಂಪದಿಂದ ಸುಮಾರು 69,000 ಜನರು ತೊಂದರೆಗೊಳಗಾಗಬಹುದು ಎಂದು ಅಂದಾಜಿಸಲಾಗಿದೆ.
2015ರಲ್ಲಿ ನೇಪಾಳ-ಟಿಬೆಟ್ ಗಡಿಯಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಆ ಸಮಯದಲ್ಲಿ ನೇಪಾಳದಲ್ಲಿ ಸುಮಾರು 9,000 ಜನರು ಸತ್ತರು. ಭಾರೀ ಆಸ್ತಿ ಹಾನಿಯೂ ಸಂಭವಿಸಿತ್ತು ಎನ್ನಲಾಗಿದೆ.