ಶಿಮುಲ್ ಅಂತಿಮ ಕಣದಲ್ಲಿ 31 ಅಭ್ಯರ್ಥಿಗಳು

shimul office
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯ ಶಿವಮೊಗ್ಗ ಹಾಲು ಒಕ್ಕೂಟದ ಹೊರನೋಟ.
Published on

ಶಿವಮೊಗ್ಗ: ಶಿಮುಲ್(ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯ ಶಿವಮೊಗ್ಗ ಹಾಲು ಒಕ್ಕೂಟ) ಆಡಳಿತ ಮಂಡಳಿ ಚುನಾವಣೆ ಕಣದಲ್ಲಿನ 14 ನಿರ್ದೇಶಕ ಸ್ಥಾನಗಳಲ್ಲಿ ಎರಡು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಘೋಷಣೆ ಬಾಕಿಯಿದೆ. ಇನ್ನುಳಿದ 12 ಸ್ಥಾನಗಳಿಗೆ ಅಂತಿಮವಾಗಿ 31 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಶಿವಮೊಗ್ಗ ವಿಭಾಗದಿಂದ ಟಿ.ಎ.ಚಂದ್ರಶೇಖರ, ಸಾಗರ ವಿಭಾಗದಿಂದ ಪಿ.ದಿವಾಕರ್, ಎಚ್.ಎಂ.ಶಿವಕುಮಾರ್, ಶ್ವೇತಾ, ದಾವಣಗೆರೆ ವಿಭಾಗದ ಎಸ್.ಆರ್.ಶಾಂತಮ್ಮ, ಜಿ.ಜಿ.ಆದರ್ಶ, ಟಿ.ಮಲ್ಲೇಶಪ್ಪ, ಚಿತ್ರದುರ್ಗ ವಿಭಾಗದಿಂದ ಜಿ.ಆರ್.ಮಂಜುನಾಥ್, ಪಿ.ಎಸ್.ಗುರುಶಾಂತಪ್ಪ ಅವರ ಅರ್ಜಿಗಳು ತಿರಸ್ಕೃತಗೊಂಡಿವೆ. ದಾವಣಗೆರೆ ವಿಭಾಗದ ಎನ್.ಎಂ.ಪ್ರಕಾಶ್, ಚಿತ್ರದುರ್ಗ ವಿಭಾಗದ ಡಿ.ಎಸ್.ಶಶಿಧರ್, ಆರ್.ತಿಮ್ಮಪ್ಪ ನಾಮಪತ್ರ ಹಿಂಪಡೆದಿದ್ದಾರೆ.
ಚಿತ್ರದುರ್ಗ ವಿಭಾಗದಲ್ಲಿ 4 ಸ್ಥಾನಗಳಿಗೆ 12 ಅಭ್ಯರ್ಥಿಗಳು, ದಾವಣಗೆರೆಯಲ್ಲಿ 4 ಸ್ಥಾನಗಳಿಗೆ 10 ಅಭ್ಯರ್ಥಿಗಳು, ಶಿವಮೊಗ್ಗದಲ್ಲಿ 2 ಸ್ಥಾನಗಳಿಗೆ ಐವರು, ಸಾಗರ ವಿಭಾಗದಲ್ಲಿ ಎರಡು ಸ್ಥಾನಗಳಿಗೆ ನಾಲ್ವರು ಕಣದಲ್ಲಿ ಉಳಿದಿದ್ದಾರೆ.
ಶಿವಮೊಗ್ಗ ವಿಭಾಗದಿಂದ ಎಸ್.ಕುಮಾರ, ಎಚ್.ಬಿ.ದಿನೇಶ್, ಕೆ.ಎಲ್.ಜಗದೀಶ್ವರ, ಡಿ.ಆನಂದ, ಟಿ.ಬಿ.ಜಗದೀಶ್ ಕಣದಲ್ಲಿದ್ದಾರೆ. ಸಾಗರ ವಿಭಾಗದಿಂದ ಬಿ.ಡಿ.ಭೂಕಾಂತ್, ಗಂಗಾಧರಪ್ಪ, ಟಿ.ಶಿವಶಂಕರಪ್ಪ, ಟಿ.ಎಸ್.ದಯಾನಂದ ಗೌಡ ಉಳಿದುಕೊಂಡಿದ್ದಾರೆ. ದಾವಣಗೆರೆ ವಿಭಾಗದಿಂದ ಬಿ.ಎಂ.ಬಸವರಾಜಪ್ಪ, ಕೆ.ಜಿ.ಸುರೇಶ್, ಎಚ್.ಕೆ.ಬಸಪ್ಪ, ಜಗದೀಶಪ್ಪ ಬಣಕಾರ್, ಎಚ್.ಕೆ.ಪಾಲಾಕ್ಷಪ್ಪ, ವೈ.ಎಂ.ಅನಿಲ್‌ಕುಮಾರ್, ಕೆ.ನಾಗರಾಜ, ಬಿ.ಜಿ.ಬಸವರಾಜಪ್ಪ, ಚೇತನ್ ನಾಡಿಗೇರ, ಡಿ.ಸಿ.ಶಾಂತವೀರಪ್ಪ ಇದ್ದಾರೆ.
ಚಿತ್ರದುರ್ಗ ವಿಭಾಗದಿಂದ ಜಿ.ಪಿ.ಯಶವಂತರಾಜು, ರಮೇಶಪ್ಪ, ಪಿ.ತಿಪ್ಪೇಸ್ವಾಮಿ, ಜಿ.ಪಿ.ರೇವಣಸಿದ್ದಪ್ಪ, ಜಿ.ಬಿ.ಶೇಖರಪ್ಪ, ಎಸ್.ಶಂಕರಲಿಂಗಪ್ಪ, ಬಿ.ಸಿ.ಸಂಜೀವಮೂರ್ತಿ, ಸಿ.ವೀರಭದ್ರಬಾಬು, ವಿ.ಕಾಂತರಾಜ್, ಪಿ.ಎಲ್.ಶಿವಣ್ಣ, ಎ.ಎಂ.ಶಿವಾನಂದ, ಬಿ.ಆರ್.ರವಿಕುಮಾರ್ ಇದ್ದಾರೆ. ಆ. 14ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಬಿ.ಎನ್.ಗಿರೀಶ್ ತಿಳಿಸಿದ್ದಾರೆ.

ಇಬ್ಬರು ಅವಿರೋಧ ಆಯ್ಕೆ: ಶಿವಮೊಗ್ಗ ವಿಭಾಗದಲ್ಲಿ ತೀರ್ಥಹಳ್ಳಿ ತಾಲೂಕಿನಿಂದ ಆರ್.ಎಂ.ಮಂಜುನಾಥ ಗೌಡ, ಸಾಗರ ವಿಭಾಗದಲ್ಲಿ ಹೊಸನಗರ ತಾಲೂಕಿನಿಂದ ವಿದ್ಯಾಧರ ಮಾತ್ರ ನಾಮಪತ್ರ ಸಲ್ಲಿಸಿರುವುದರಿಂದ ಎರಡು ತಾಲೂಕುಗಳಿಗೆ ಚುನಾವಣೆ ನಡೆಯುವುದಿಲ್ಲ. ಆಯ್ಕೆಯ ಅಧಿಕೃತ ಘೋಷಣೆ ಬಾಕಿ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net