ಚುನಾವಣೆಗೆ 300 ಕೋಟಿ ರೂ.: ಕೊನೆಯ ಪೂರಕ ಅಂದಾಜು ಮಂಡನೆ; 8 ಸಾವಿರ ಕೋಟಿ ರೂ. ಗಾತ್ರ

Election Commission of India
Published on

ಬೆಳಗಾವಿ: ಮುಂಬರುವ ವಿಧಾನಸಭೆ ಚುನಾವಣೆ ತಯಾರಿಗೆ 300 ಕೋಟಿ ರೂ., ಚರ್ಮಗಂಟು ರೋಗದಿಂದ ಮೖತಪಟ್ಟ ರಾಸುಗಳ ಮಾಲೀಕರಿಗೆ ಪರಿಹಾರ ನೀಡುವುದು ಸೇರಿ ಗಣ್ಯರು ಬಳಸುವ ಹೆಲಿಕಾಪ್ಟರ್ ಮತ್ತು ವಿಮಾನದ ಬಾಡಿಗೆ ಪಾವತಿಸುವುದಕ್ಕೆ 6 ಕೋಟಿ ರೂ. ಮೀಸಲಿಡುವುದು ಒಳಗೊಂಡಂತೆ 8,001.13 ಕೋಟಿ ರೂ.ಗಳ ಪೂರಕ ಅಂದಾಜುಗಳನ್ನು (ಸಪ್ಲಿಮೆಂಟರಿ ಬಜೆಟ್)

ಸೋಮವಾರ ಸರ್ಕಾರ ಮಂಡಿಸಿದೆ. ಮಳೆಗಾಲದ ಅಧಿವೇಶನದಲ್ಲಿ ಚರ್ಮಗಂಟು ರೋಗ ಉಲ್ಬಣಿಸುತ್ತಲೇ ಹೋಗಿ ನೂರಾರು ರಾಸುಗಳು ಮೃತಪಟ್ಟಿದ್ದ ಬಗ್ಗೆ ಚರ್ಚೆಯಾಗಿತ್ತು. ಇದೀಗ ಚರ್ಮಗಂಟು ರೋಗದಿಂದ ಮೖತಪಟ್ಟ ರಾಸುಗಳ ಮಾಲೀಕರಿಗೆ ಪರಿಹಾರ ನೀಡುವುದಕ್ಕೆ 30 ಕೋಟಿ ರೂ. ನಿಗದಿ ಮಾಡಿರುವುದು ಗಮನಾರ್ಹ. ನಿವೖತ್ತಿ ಹೊಂದುವ ಅಧಿಕಾರಿ ಮತ್ತು ಸಿಬ್ಬಂದಿಯ ಅಂತಿಮ ಹಂತದ ರಜೆ ನಗದೀಕರಣಕ್ಕಾಗಿ 8 ಕೋಟಿ ರೂ. ಒದಗಿಸಲಾಗಿದೆ. ಅಬಕಾರಿ ಇಲಾಖೆಯ ಕೇಂದ್ರೀಯ ರಾಸಾಯನಿಕ ಪ್ರಯೋಗಾಲಯದ ಉನ್ನತೀಕರಣಕ್ಕಾಗಿ 45 ಲಕ್ಷ ರೂ., ಐಐಎಂಗೆ ಶುಲ್ಕವಾಗಿ ಪಾವತಿಸಲು ವಾಣಿಜ್ಯ ತೆರಿಗೆ ಇಲಾಖೆಗೆ 3 ಕೋಟಿ ರೂ. ಒದಗಿಸಲಾಗಿದೆ.

ಸಮುದಾಯಗಳಿಗೆ ಅಭಿವೃದ್ಧಿ ಕೊಡುಗೆ: ವಿಶ್ವ ಗಾಣಿಗರ ಸಮುದಾಯ ಚಾರಿಟಬಲ್ ಟ್ರಸ್ಟ್​ನ ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಸರ್ವಾಂಗೀಣ ಅಭಿವೃದ್ಧಿಗೆ 3.50 ಕೋಟಿ ರೂ., ಚಾಮರಾಜನಗರ ಜಿಲ್ಲೆ ಚಿಕ್ಕಲ್ಲೂರು ಹೊಸ ಮಠದ ಶ್ರೀ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ನಿರ್ವಿುಸುವ ಸಮುದಾಯ ಭವನಕ್ಕೆ 2 ಕೋಟಿ ರೂ., ಅಖಿಲ ಭಾರತ ಗಾಣಿಗರ ಕ್ಷೇಮಾಭಿವೃದ್ಧಿ ಸಂಘ ಹಿರಿಯೂರಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 2 ಕೋಟಿ ರೂ., ಕೊಡವ ಸಮಾಜ ಮಾದಾಪುರದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ1 ಕೋಟಿ ರೂ. ಹೆಚ್ಚುವರಿಯಾಗಿ ಒದಗಿಸಲಾಗಿದೆ. ಅದೇ ರೀತಿ ಈಡಿಗ, ಬಿಲ್ಲವ ಜನಾಂಗದ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಕೋಶ ಸೃಜಿಸಲು10 ಕೋಟಿ ರೂ. ನೀಡಲಾಗಿದೆ.

ಮುಖ್ಯಾಂಶಗಳು

  • ರಾಜ್ಯದ ಗೋ ತಳಿಯನ್ನ ರೈತರಿಗೆ ಹಂಚಿಕೆ ಮಾಡಲು 7 ಕೋಟಿ ರೂ.
  • ಹಾಪ್​ಕಾಮ್ಸ್​ನ ದುಡಿಯುವ ಬಂಡವಾಳಕ್ಕಾಗಿ 12 ಕೋಟಿ ರೂ.
  • ನಾಡದೋಣಿಗೆ ಮೋಟರೀಕೃತ ನಾಡದೋಣಿಗಳಿಗೆ ಸೀಮೆಎಣ್ಣೆ ವಿತರಿಸಲು 18.42 ಕೋಟಿ ರೂ.
  • ವೇತನ ಆಯೋಗದ ಅಧ್ಯಕ್ಷರು, ಸದಸ್ಯರ ಉಪಯೋಗಕ್ಕೆ 4 ವಾಹನಕ್ಕೆ 75 ಲಕ್ಷ ರೂ.
  • ಎಚ್​ಆರ್​ಎಂಎಸ್-2ಗಾಗಿ ಒರೇಕಲ್ ಪರವಾನಗಿ ಪಡೆಯಲು 9.98.63 ಕೋಟಿ ರೂ. ಹೆಚ್ಚುವರಿ ನೀಡಿಕೆ.
  • ರಾಜ್ಯಪಾಲರು, ಸಿಎಂ, ಸಚಿವರು, ಇತರ ಗಣ್ಯ ವ್ಯಕ್ತಿಗಳ ಅಧಿಕೃತ ಪ್ರವಾಸಕ್ಕೆ ಬಾಡಿಗೆ ಆಧಾರದ ಮೇಲೆ ಪಡೆಯುವ ಹೆಲಿಕಾಫ್ಟರ್, ಏರ್​ಕ್ರಾಫ್ಟ್ ಬಿಲ್ಲುಗಳನ್ನು ಪಾವತಿಸಲು 6 ಕೋಟಿ ರೂ.
  • ಆಪ್ಟಿಕಲ್ ಫೈಬರ್ ಕೇಬಲ್ ಯೋಜನೆಗೆ 156 ಕೋಟಿ ರೂ.
  • ಜಿ 20 ಶೃಂಗಸಭೆಗೆ ಭದ್ರತಾ ಉಪಕರಣ ಖದೀರಿಸಲು 3.59 ಕೋಟಿ ರೂ.
  • ನಮ್ಮ ಹೊಲ ನಮ್ಮ ದಾರಿ ಯೋಜನೆ ಅನುಷ್ಠಾನಕ್ಕೆ 25 ಕೋಟಿ ರೂ., ಜಲಧಾರೆ ನಿರ್ವಹಣೆಗೆ 200 ಕೋಟಿ ರೂ.
  • ಪರಿಶಿಷ್ಟ ಜಾತಿ ಪಿಎಚ್.ಡಿ ವಿದ್ಯಾರ್ಥಿಗಳ ಶಿಷ್ಯವೇತನಕ್ಕೆ 11.25 ಕೋಟಿ ರೂ., ಪರಿಶಿಷ್ಟ ಪಂಗಡಕ್ಕೆ 4.66 ಕೋಟಿ ರೂ.
  • ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಕಾಮಗಾರಿ ಪೂರ್ಣಕ್ಕೆ -ಠಿ;41.09 ಕೋಟಿ
  • ದೀನ ದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯ ಯೋಜನೆಗಾಗಿ 36 ಕೋಟಿ ರೂ.
  • ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ವಣದ ಕಾಮಗಾರಿಗೆ 4.99 ಕೋಟಿ ರೂ.
  • ಯಾದಗಿರಿಯಲ್ಲಿ 50 ಸಾವಿರ ಹಕ್ಕು ಪತ್ರ ವಿತರಿಸುವ ಕಾರ್ಯಕ್ರಮಕ್ಕೆ -ಠಿ;7 ಕೋಟಿ
  • ಮುಖ್ಯಮಂತ್ರಿ ಒಂದು ಲಕ್ಷ ಬಹು ಮಹಡಿ ವಸತಿ ಯೋಜನೆಯಡಿ ನಿಗದಿಪಡಿಸಿರುವ ಗುರಿ ಸಾಧಿಸಲು 256 ಕೋಟಿ ರೂ.
  • ಸರ್ಕಾರಿ ಶಾಲಾ ಮತ್ತು ಕಾಲೇಜುಗಳ ಕೊಠಡಿಗಳ ನಿರ್ವಣ, ದುರಸ್ತಿ ವೆಚ್ಚಕ್ಕೆ 150 ಕೋಟಿ ರೂ. ಹೆಚ್ಚುವರಿ.
  • ಹೊಸದಾಗಿ ಆಂಬ್ಯುಲೆನ್ಸ್ ಖರೀದಿಗೆ 35.99 ಕೋಟಿ ರೂ.
  • ಗಿರೀಶ್ ಕಾರ್ನಾಡ್ ರಚಿತ ಕ್ರಾಸಿಂಗ್ ತಾಳಿಕೋಟಾ ನಾಟಕ ಪ್ರದರ್ಶನಕ್ಕಾಗಿ 15 ಲಕ್ಷ ರೂ. ಆರ್ಥಿಕ ನೆರವು.
  • ವಿವಿಧ ಸಾಹಿತ್ಯಿಕ ಸಾಂಸ್ಕೃತಿಕ ಸಂಘ-ಸಂಸ್ಥೆಗಳಿಗೆ ಧನ ಸಹಾಯಕ್ಕಾಗಿ 9.27 ಕೋಟಿ ರೂ.
  • ಚಿಕ್ಕಮಗಳೂರು ಹಬ್ಬಕ್ಕೆ 5 ಕೋಟಿ ರೂ.
  • ರಂಗ ಮಂದಿರ ನಿರ್ವಣ, ಪ್ರಗತಿಯಲ್ಲಿರುವ ಮಂದಿರಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲು ಹಣ ಮೀಸಲು.
  • ಪುನೀತ್ ರಾಜ್​ಕುಮಾರ್​ಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಕಾರ್ಯಕ್ರಮ ಆಯೋಜನೆಗೆ 5 ಕೋಟಿ ರೂ.
  • ಮೈಸೂರು ಶಕ್ತಿಧಾಮ ಸಂಸ್ಥೆಗೆ -ಠಿ;2.50 ಕೋಟಿ ಹೆಚ್ಚುವರಿ ಅನುದಾನ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net