30 ಮಕ್ಕಳಿಗೆ ಪಠ್ಯ ಸಾಮಗ್ರಿ ವಿತರಣೆ

25 nrp 2 school
ಎನ್.ಆರ್.ಪುರ ತಾಲೂಕು ಸೂಸಲವಾನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 30 ಮಕ್ಕಳಿಗೆ ಪಠ್ಯ ಸಾಮಗ್ರಿ ವಿತರಿಸಲಾಯಿತು. ಎಸ್.ಎಸ್.ಜಗದೀಶ್, ಎಸ್.ಎಸ್.ಪುಟ್ಟಸ್ವಾಮಿ, ಡಿ.ರಮೇಶ್, ಕೆ.ಎಂ.ಕೃಷ್ಣಮೂರ್ತಿ, ಕುಮಾರ್ ಜಿ. ಶೆಟ್ಟಿ, ಜಿ.ದಿವಾಕರ, ಡಿ.ನಾಗೇಶಗೌಡ, ಎಂ.ಆರ್.ಸುಂದರೇಶ್ ಇತರರಿದ್ದರು
Published on

ಎನ್.ಆರ್.ಪುರ: ಸರ್ಕಾರವು ಎಲ್ಲ ಸೌಲಭ್ಯ ಕಲ್ಪಿಸಿರುವುದರಿಂದ ಸರ್ಕಾರಿ ಶಾಲೆ ಮೇಲಿನ ಕೀಳರಿಮೆ ಬಿಟ್ಟು ಕಲಿಕೆಯ ಕಡೆ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ತಾಲೂಕು ಘಟಕದ ಅಧ್ಯಕ್ಷ ಎಸ್.ಎಸ್.ಜಗದೀಶ್ ತಿಳಿಸಿದರು.

ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್‌ಯಿಂದ ಸೂಸಲವಾನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 30 ಮಕ್ಕಳಿಗೆ ಸ್ಕೂಲ್ ಬ್ಯಾಗ್, ಛತ್ರಿ, ನೋಟ್‌ಬುಕ್, ಜಾಮಿಟ್ರಿ ಬಾಕ್ಸ್ ಹಾಗೂ ಇತರ ಶಾಲಾ ಪರಿಕರ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸೀನಿಯರ್ ಚೇಂಬರ್ ಹಲವು ಸಮಾಜಮುಖಿ ಕಾರ್ಯಕ್ರಮ ನಡೆಸುತ್ತ ಬಂದಿದೆ. ಸೂಸಲವಾನಿಯ ಸರ್ಕಾರಿ ಶಾಲೆಯ 30 ಮಕ್ಕಳಿಗೆ ಶಾಲಾ ಪರಿಕರ ನೀಡಿದ್ದೇವೆ ಎಂದರು.

ಕಲಿಕಾ ಸಾಮಗ್ರಿ ಕೊಡುಗೆಯಾಗಿ ನೀಡಿದ ದಾನಿ ಬೆಂಗಳೂರಿನ ಎಂ.ಟಿ.ಆರ್.ಕಂಪನಿ ಉದ್ಯೋಗಿ ಸೂಸಲವಾನಿ ಎಸ್.ಎಸ್.ಪುಟ್ಟಸ್ವಾಮಿ ಹಾಗೂ ಇನೋರ್ವ ದಾನಿ ಸೀನಿಯರ್ ಚೇಂಬರ್‌ನ ಉಪಾಧ್ಯಕ್ಷ ಡಿ.ರಮೇಶ್, ಕಾರ್ಯದರ್ಶಿ ಕೆ.ಎಂ.ಕೃಷ್ಣಮೂರ್ತಿ, ನಿರ್ದೇಶಕರಾದ ಕುಮಾರ್ ಜಿ. ಶೆಟ್ಟಿ, ಜಿ.ದಿವಾಕರ, ಡಿ.ನಾಗೇಶಗೌಡ, ಎಂ.ಆರ್.ಸುಂದರೇಶ್, ಎಸ್‌ಡಿಎಂಸಿ ಅಧ್ಯಕ್ಷ ನಾಗೇಶ್, ಮುಖ್ಯಶಿಕ್ಷಕ ರಾಜಪ್ಪ, ಸಹಶಿಕ್ಷಕಿ ಪ್ರಮೀಳಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net