ಸ್ಟೂಲ್​ನಲ್ಲಿ ಪತ್ತೆಯಾದ 30.6 ಲಕ್ಷ ರೂ.

Money
Published on

ಸಾಮಾನ್ಯವಾಗಿ ಕಷ್ಟಕಾಲಕ್ಕೆ ಇರಲಿ ಎಂದು ಹಿಂದಿನ ಕಾಲದ ಹಿರಿಯರು ಸ್ವಲ್ಪ ಹಣವನ್ನು ಬಚ್ಚಿಡುವುದುಂಟು. ಕೆಲವರು ಮಂಚದ ಕೆಳಗೂ ಮುಚ್ಚಿಡುವುದುಂಟು. ಕೆಲವೊಮ್ಮೆ ಅವರಿಗೇ ಅದು ಮರೆತುಹೋಗಿರುತ್ತದೆ. ಇದೇ ಥರದ ಘಟನೆಯೊಂದು ಅಮೆರಿಕದ ಮಿಚಿಗನ್ ಬಳಿ ನಡೆದಿದೆ.

ಹೋವರ್ಡ್ ಕರ್ಬಿ ಎನ್ನುವವರು ಕ್ರಿಸ್​ವುಸ್​ಗೆಂದು 70 ಡಾಲರ್ ಕೊಟ್ಟು ಫರ್ನಿಚರ್ ಖರೀದಿಸಿದ್ದರು. ಇವುಗಳಲ್ಲಿ ಒಂದಾದ ಸ್ಟೂಲ್ ಯಾಕೋ ಸರಿಯಾಗಿಲ್ಲ ಎನಿಸಿತ್ತು. ಅದಕ್ಕೆ ಏನಾಗಿದೆ ಎಂದು ತಿಳಿದುಕೊಳ್ಳಲು ಅವರ ಮಗಳು ಆ ಸಣ್ಣ ಸ್ಟೂಲ್​ನ ಜಿಪ್ ಎಳೆದು ನೋಡಿ ಬೆಚ್ಚಿಬಿದ್ದಳು. ಏಕೆಂದರೆ ಅದರಲ್ಲಿ ಆ ಸ್ಟೂಲ್​ನ ಹಿಂದಿನ ಮಾಲೀಕ 43,170 (30.6 ಲಕ್ಷ ರೂ.) ಡಾಲರ್ ಬಚ್ಚಿಟ್ಟಿದ್ದರು. ಇದನ್ನು ಕಂಡ ಹೋವರ್ಡ್ ಅಷ್ಟೂ ಹಣವನ್ನು ಆ ಸ್ಟೂಲ್ ಜತೆ ಹಿಂದಿನ ಮಾಲೀಕರಿಗೆ ಹಿಂದಿರುಗಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net