3 ಕೋಟಿ ರೂ. ಅನುದಾನ

5 Tke 4 photo
ಅಜ್ಜಂಪುರ ತಾಲೂಕು ಚಿಕ್ಕಾನವಂಗಲದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಸನ್ಮಾನಿಸಲಾಯಿತು. ಕೋಟ ಶ್ರೀನಿವಾಸ ಪೂಜಾರಿ, ಜಿ.ಎಚ್.ಶ್ರೀನಿವಾಸ್, ಸಿ.ಎಂ.ರಾಜಪ್ಪ, ಕೆ.ಆರ್.ಆನಂದಪ್ಪ, ಕೆ.ಆರ್.ಧ್ರುವಕುಮಾರ್, ಕೆ.ಎಚ್.ಮಹೇಂದ್ರ ಇತರರಿದ್ದರು.
Published on

ತರೀಕೆರೆ: ಶಿವನಿ ಮತ್ತು ಅಜ್ಜಂಪುರ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ ತಲಾ 3 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ಅಜ್ಜಂಪುರ ತಾಲೂಕಿನ ಚಿಕ್ಕಾನವಂಗಲ ಗ್ರಾಮದ ಶ್ರೀ ಚನ್ನಬಸವೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಚಿಕ್ಕಮಗಳೂರು-ತಿರುಪತಿಗೆ ಸಂಪರ್ಕಿಸುವ ರೈಲು ಮುಂದಿನ ಶುಕ್ರವಾರದಿಂದ ಕಾರ್ಯಾರಂಭ ಮಾಡಲಿದೆ. ಕೇಂದ್ರ ಸರ್ಕಾರದಿಂದ ರಾಜ್ಯದ ರೈಲ್ವೆಗೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿಪಡಿಸಲಾಗುವುದು. ತರೀಕೆರೆ ಪಟ್ಟಣ ಸಮೀಪದ ಉಪ್ಪಾರ ಬಸವನಹಳ್ಳಿ ಬಳಿಯಷ್ಟೇ ಅಲ್ಲ, ಜಿಲ್ಲೆಯ ಅಗತ್ಯವಿರುವ ಕಡೆ ಮೇಲ್ಸೇತುವೆ ನಿರ್ಮಿಸಲಾಗುವುದು ಎಂದರು.

ಬಿಜೆಪಿ ಮುಖಂಡ ಸಿ.ಎಂ.ರಾಜಪ್ಪ ಅವರು ಗ್ರಾಮಸ್ಥರ ಸಹಕಾರದೊಂದಿಗೆ ವಂದೇ ಭಾರತ್ ರೈಲುಗಾಡಿ ಮಾದರಿಯ 2 ಕೆ.ಜಿ ತೂಕದ ಬೆಳ್ಳಿ ಸ್ಮರಣಿಕೆಯನ್ನು ಸಚಿವ ವಿ.ಸೋಮಣ್ಣ ಅವರಿಗೆ ನೀಡಿ ಸನ್ಮಾನಿಸಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಜಿ.ಎಚ್.ಶ್ರೀನಿವಾಸ್, ರಾಜ್ಯ ಬಿಜೆಪಿ ಮುಖಂಡ ಸಿ.ಎಂ.ರಾಜಪ್ಪ, ಮಾಜಿ ಜಿಪಂ ಅಧ್ಯಕ್ಷ ಕೆ.ಆರ್.ಧ್ರುವಕುಮಾರ್, ಮಾಜಿ ಉಪಾಧ್ಯಕ್ಷರಾದ ಕೆ.ಆರ್.ಆನಂದಪ್ಪ, ಎಸ್.ಬಿ.ಆನಂದಪ್ಪ, ಪ್ರಮುಖರಾದ ಕೆ.ಎಚ್.ಮಹೇಂದ್ರ, ರವಿ ಶ್ಯಾನುಭೋಗ್, ಕೆ.ಸಿ.ಶಿವಮೂರ್ತಿ, ಡಾ.ಮಲ್ಲೇಶಪ್ಪ, ಗ್ರಾ.ಪಂ ಅಧ್ಯಕ್ಷೆ ಸಿ.ಎಚ್.ಬಸಮ್ಮ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net