ಅಪ್ರಾಪ್ತೆಗೆ ಕೈ ಸನ್ನೆ ಮಾಡಿದ ಅಪರಾಧಿಗೆ 3 ವರ್ಷ ಜೈಲು ಶಿಕ್ಷೆ

arrest (1)
Published on

ಬೆಂಗಳೂರು: ಅಪ್ರಾಪ್ತ ಬಾಲಕಿಗೆ ಅಸಭ್ಯವಾಗಿ ವರ್ತಿಸಿ ಸನ್ನೆ ಮಾಡಿ ಬಾ ಎಂದು ಕರೆದು ಲೈಂಗಿಕ ಕಿರುಕುಳ ನೀಡಿದ ಅಪರಾಧಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ನೆಲಗದರಹಳ್ಳಿ ನಿವಾಸಿ ಡಿ. ತಿಮ್ಮೇಶ್(25) ಅಪರಾಧಿ. 3 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ. ದಂಡ ವಿಧಿಸಿ ಎ್ಟಿಎಸ್‌ಸಿ 1ನೇ ನ್ಯಾಯಾಲಯ ನ್ಯಾಯಾಧೀಶರಾದ ಕೆ.ಎನ್.ರೂಪಾ ತೀರ್ಪು ನೀಡಿದ್ದಾರೆ.

ಅಪರಾಧಿ ತಿಮ್ಮೇಶ್,ಫ್ಲಂಬರ್ ಕೆಲಸ ಮಾಡುತ್ತಿದ್ದ. 2021ರ ಡಿ.25ರ ಮಧ್ಯಾಹ್ನ 2 ಗಂಟೆಯಲ್ಲಿ ಅಪರಾಧಿ ಮನೆ ಸಮೀಪದಲ್ಲಿ ಪಾಲಕರ ಜೊತೆಗೆ ನೆಲೆಸಿದ್ದ 10 ವರ್ಷದ ಬಾಲಕಿಗೆ ತನ್ನ ಮನೆ ಮುಂದೆ ನಿಂತಿದ್ದಳು. ಅಪರಾಧಿ, ತನ್ನ ಮನೆಯ ಬಾಗಿಲು ತೆಗೆದು ಖಾಸಗಿ ಅಂಗವನ್ನು ತೋರಿಸಿ ಅಸಭ್ಯವಾಗಿ ವರ್ತಿಸಿ ಸನ್ನೆ ಮಾಡಿ ಬಾ ಎಂದು ಕರೆದು ಲೈಂಗಿಕ ಕಿರುಕುಳ ನೀಡಿದ್ದ. ಇದನ್ನು ಪ್ರಶ್ನಿಸಲು ಹೋದ ಸಂತ್ರಸ್ತೆಯ ತಂದೆಗೆ ಅವಾಚ್ಯ ಶಬ್ಧಗಳಿಂದ ಬೈದು ಪ್ರಾಣ ಬೆದರಿಕೆ ಒಡ್ಡಿದ್ದ. ನೊಂದ ಬಾಲಕಿ ತಂದೆ, ಪೀಣ್ಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತಿಮ್ಮೇಶ್‌ನನ್ನು ಬಂಧಿಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. 11 ಜನ ಸಾಕ್ಷಿದಾರರು ಹೇಳಿಕೆ ನೀಡಿದ್ದರು. ಸರ್ಕಾರಿ ಅಭಿಯೋಜಕರಾಗಿ ಪಿ. ಕೃಷ್ಣವೇಣಿ ವಾದ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾ.ಕೆ.ಎನ್. ರೂಪಾ ಅವರು, ಅಪರಾಧಿ ಎಂದು ತೀರ್ಪು ನೀಡಿದ್ದಾರೆ. ಸಂತ್ರಸ್ತೆಗೆ 25 ಸಾವಿರ ರೂ. ಪರಿಹಾರ ನೀಡುವಂತೆ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net