ಬಾಳೆಹಣ್ಣಿನ ಆಮಿಷ ಒಡ್ಡಿ ಆಟವಾಡ್ತಿದ್ದ 3 ವರ್ಷದ ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರ: ಆರೋಪಿ ಬಂಧನ |Andhra Pradesh

Andhra Pradesh
Published on

Andhra Pradesh: ಮೂರು ವರ್ಷದ ಬಾಲಕಿಯ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಮಾಡಿ ಕೊಲೆಗೈದ ಆಘಾತಕಾರಿ ಘಟನೆ ಆಂಧ್ರಪ್ರದೇಶದ ವೈಎಸ್ಆರ್ ಕಡಪ ಜಿಲ್ಲೆಯಲ್ಲಿ ನಡೆದಿದೆ.

ಆಂಧ್ರಪ್ರದೇಶದ ವೈಎಸ್ಆರ್ ಕಡಪ ಜಿಲ್ಲೆಯಲ್ಲಿ ಮೂರು ವರ್ಷದ ಬಾಲಕಿ ಸಭಾಂಗಣದ ಹೊರಗೆ ಕಳೆ ತೆಗೆಯುವ ಆಟವಾಡುತ್ತಿದ್ದಾಗ, ಒಬ್ಬ ವ್ಯಕ್ತಿ ಆ ಬಾಲಕಿಗೆ ಬಾಳೆಹಣ್ಣು ನೀಡುವ ಆಮಿಷ ಒಡ್ಡಿ ಹತ್ತಿರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.

ಸಂತ್ರಸ್ತೆ ತನ್ನ ಹೆತ್ತವರಿಗೆ ಈ ಬಗ್ಗೆ ತಿಳಿಸಬಹುದೆಂಬ ಭಯದಿಂದ ಆ ವ್ಯಕ್ತಿ ಮಗುವನ್ನು ಕತ್ತು ಹಿಸುಕಿ ಕೊಂದಿದ್ದಾನೆ. ಆ ಮಗುವಿನ ಪೋಷಕರು ಆಕೆಗಾಗಿ ಎಷ್ಟೂ ಹುಡುಕಾಡಿದರು ಅವಳು ಸಿಗಲಿಲ್ಲ. ನಂತರ, ಆಕೆಯ ಮೃತದೇಹ ಪೊದೆಯಲ್ಲಿ ಪತ್ತೆಯಾಗಿದೆ.

ಗ್ರಾಮಸ್ಥರು, ಅಪರಾಧಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net