ಏಕಾಂಗಿಯಾಗಿ ಆಟವಾಡುತ್ತಿದ್ದ ಪುಟ್ಟ ಬಾಲಕಿಗೆ ಜವರಾಯನಾದ ಗಾಜಿನ ಬಾಗಿಲು; ಘಟನೆ ವಿಡಿಯೋ ವೈರಲ್‌

door
Published on

ಪಂಜಾಬ್‌: ಲೂಧಿಯಾನದಲ್ಲಿ ಗಾರ್ಮೆಂಟ್‌ ಶೋರೂಂ ಒಂದರ ಗಾಜಿನ ಬಾಗಿಲು ಮುರಿದು ಬಿದ್ದು 3 ವರ್ಷದ ಬಾಲಕಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪೋಷಕರ ಕಣ್ತಪ್ಪಿಸಿ ಬೃಹತ್ ಗಾಜಿನ ಬಾಗಿಲು ಬಳಿ ಬಾಲಕಿ ಏಕಾಂಗಿಯಾಗಿ ಆಟವಾಡುತ್ತಿದ್ದಾಗ ಗಾಜಿನ ಬಾಗಿಲು ಬಿದ್ದು ಸಾವನ್ನಪ್ಪಿರುವ ದೃಶ್ಯ ವಿಡಿಯೋದಲ್ಲಿದ್ದು, ಮೃತ ಬಾಲಕಿಯನ್ನು ದಿವ್ರೀನ್ ಕೌರ್ ಎಂದು ಗುರುತಿಸಲಾಗಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಬಾಲಕಿಯು ಬಾಗಿಲಿನ ಸುತ್ತಲೂ ತೂಗಾಡುತ್ತಾ ಆಟವಾಡುತ್ತಿದ್ದಾಗ ಬಾಗಿಲು ಅವಳ ಮೇಲೆ ಬಿದ್ದಿದೆ. ಜೊತೆಗೆ ಬಾಗಿಲಿನ ಹ್ಯಾಂಡಲ್ ಅನ್ನು ಬಿಗಿಯಾಗಿ ಹಿಡಿದುಕೊಂಡ ಪರಿಣಾಮ ಗಂಭೀರ ಗಾಯಗಳಾಗಿತ್ತು. ಬಾಲಕಿಯನ್ನು ಗಾಜಿನ ಸರಪಳಿಯಿಂದ ಪಾರುಮಾಡಿ ಸಮೀಪದ ಆಸ್ಪತ್ರೆಗೆ ಕರೆದೊಯ್ದರು ಬದುಕುಳಿಯಲಿಲ್ಲ. ಪ್ರಕರಣದಲ್ಲಿ ವಿಚಾರಣೆ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದ್ದು, ಬಾಲಕಿಯ ಪೋಷಕರು ಗಾರ್ಮೆಂಟ್‌ ಶೋರೂಂ ಮಾಲೀಕರ ವಿರುದ್ಧ ದೂರು ನೀಡಲು ನಿರಾಕರಿಸಿದ್ದಾರೆ ಎಂದು ಸಬ್ ಇನ್ಸ್‌ಪೆಕ್ಟರ್ ವಿಜಯ್ ಕುಮಾರ್ ಹೇಳಿದರು.

ಪಾಲಕರು ಸಾಮಾನ್ಯವಾಗಿ ತಮ್ಮ ಮಕ್ಕಳನ್ನು ಶಾಪಿಂಗ್ ಅಥವಾ ಇನ್ನಾವುದೇ ಕೆಲಸಕ್ಕೆ ಹೊದಾಗ, ಮಕ್ಕಳು ಏಕಾಂಗಿಯಾಗಿ ಆಟವಾಡಲು ಬಿಟ್ಟು ಬಿಡುತ್ತಾರೆ. ಇದ್ದರಿಂದ ಮಕ್ಕಳು ಗಂಭೀರವಾಗಿ ಗಾಯಗೊಂಡು, ಕೆಲವು ಸಂದರ್ಭ ಸಾವಿನತನಕ ಹೋಗುತ್ತದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net