More

    ದಕ್ಷಿಣ ಆಫ್ರಿಕಾದ ಪ್ಲಾಟಿನಂ ಗಣಿಯಲ್ಲಿ ಲಿಫ್ಟ್ ಕುಸಿದು 11 ಕಾರ್ಮಿಕರು ದುರ್ಮರಣ, 75 ಮಂದಿಗೆ ಗಾಯ..ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಸಾಧ್ಯತೆ

    ದಕ್ಷಿಣ ಆಫ್ರಿಕಾ: ಭಾರತದಲ್ಲಿ ಉತ್ತರ ಕಾಶಿಯ ಸುರಂಗದಲ್ಲಿ ಸಿಕ್ಕಿಬಿದ್ದ ಕಾರ್ಮಿಕರನ್ನು ಉಳಿಸಲು ದೀಪಾವಳಿಯಿಂದ ಪ್ರಯತ್ನಗಳು ನಡೆಯುತ್ತಿವೆ. ನ.28 ರ ಮಧ್ಯಾಹ್ನ ಅಂದರೆ ಇಂದು ಅವರನ್ನು ಹೊರತರುವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ ಮತ್ತೊಂದೆಡೆ, ದಕ್ಷಿಣ ಆಫ್ರಿಕಾದಲ್ಲಿ ಪ್ಲಾಟಿನಂ ಗಣಿಯಲ್ಲಿದ್ದ ಜನರ ಮೇಲೆ ಲಿಫ್ಟ್ ಕುಸಿದು 11 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಮಾಹಿತಿಯ ಪ್ರಕಾರ, ದಕ್ಷಿಣ ಆಫ್ರಿಕಾದ ಪ್ಲಾಟಿನಂ ಗಣಿಯಲ್ಲಿ ಲಿಫ್ಟ್ ಕುಸಿದು 11 ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು 75 ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

    ದಕ್ಷಿಣ ಆಫ್ರಿಕಾದ ಪ್ಲಾಟಿನಂ ಗಣಿಯಲ್ಲಿ ಕಾರ್ಮಿಕರನ್ನು ಇಳಿಸುವಾಗ ಲಿಫ್ಟ್ ಇದ್ದಕ್ಕಿದ್ದಂತೆ ಕುಸಿದಿದೆ. ಇದರಿಂದ 11 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಗಣಿ ನಿರ್ವಾಹಕರು ಮಂಗಳವಾರ ಈ ಮಾಹಿತಿ ನೀಡಿದರು. ಸೋಮವಾರ ಸಂಜೆ ಉತ್ತರ ನಗರದ ರಸ್ಟೆನ್‌ಬರ್ಗ್‌ನ ಗಣಿಯಲ್ಲಿ ಈ ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ತನಿಖೆ ಪ್ರಾರಂಭ
    ಇಂಪಾಲಾ ಪ್ಲಾಟಿನಂ ಹೋಲ್ಡಿಂಗ್ಸ್ (ಇಂಪ್ಲಾಂಟ್ಸ್) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಕೊ ಮುಲ್ಲರ್, ಇದು ತಮ್ಮ ಕಂಪನಿಯ ಇತಿಹಾಸದಲ್ಲಿ ಅತ್ಯಂತ ಭಯಾನಕ ದಿನವಾಗಿದೆ. ಘಟನೆಗೆ ಕಾರಣ ತಿಳಿಯಲು ತನಿಖೆ ಆರಂಭಿಸಲಾಗಿದೆ. ದಕ್ಷಿಣ ಆಫ್ರಿಕಾವು ಪ್ಲಾಟಿನಂನ ಅತಿದೊಡ್ಡ ಉತ್ಪಾದಕವಾಗಿದೆ ಎಂದರು.

    ದಕ್ಷಿಣ ಆಫ್ರಿಕಾದಲ್ಲಿ ಸಂಭವಿಸಿದ ಈ ಗಣಿ ಅವಘಡದಲ್ಲಿ ಸಾವು ಸಂಭವಿಸಿದ್ದರೆ, ಭಾರತದ ಉತ್ತರಕಾಶಿಯಲ್ಲಿ ಗಣಿಯಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ಸ್ಥಳಾಂತರಿಸುವ ಕಾರ್ಯ 14 ದಿನಗಳಿಂದ ನಡೆಯುತ್ತಿದೆ. ಮಂಗಳವಾರ ಉತ್ಖನನ ಕಾರ್ಯ ಪೂರ್ಣಗೊಂಡಿದ್ದು, ಕಾರ್ಮಿಕರನ್ನು ರಕ್ಷಿಸಲು ಆಂಬುಲೆನ್ಸ್‌ಗಳನ್ನು ಅಲರ್ಟ್ ಮಾಡಲಾಗಿದೆ. ಸುರಕ್ಷತೆ ಮತ್ತು ವೈದ್ಯಕೀಯ ಮಾನದಂಡಗಳೊಂದಿಗೆ ಕಾರ್ಮಿಕರನ್ನು ಸ್ಥಳಾಂತರಿಸುವ ಕಸರತ್ತು ಮಂಗಳವಾರ ಮಧ್ಯಾಹ್ನ ಮುಂದುವರೆಯಿತು.

    ಅಯೋಧ್ಯೆಯ ರಾಮಮಂದಿರಕ್ಕೆ ‘ವಿಶೇಷ ಉಡುಗೊರೆ’ ಕಳುಹಿಸಲಿದೆ ಥಾಯ್ಲೆಂಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts