More

    ಸಾವಿನ ದವಡೆಯಿಂದ ಗ್ರೇಟ್​ ಎಸ್ಕೇಪ್​! ಬೆಳಗ್ಗೆ ಯಾರ ಮುಖ ನೋಡಿದೆ ನಿನ್ನ ಅದೃಷ್ಟ ಚೆನ್ನಾಗಿತ್ತು ಎಂದ ನೆಟ್ಟಿಗರು

    ಕೇಪ್​ಟೌನ್​: ಮೃಗಾಲಯ ಸಿಬ್ಬಂದಿಯೊಬ್ಬರು 15 ಅಡಿ ಉದ್ದದ ದೈತ್ಯ ಮೊಸಳೆಯ ದವಡೆಯಿಂದ ಸ್ವಲ್ಪದರಲ್ಲೇ ಬಚಾವ್​ ಆಗಿರುವ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ನೆಟ್ಟಿಗರ ಹುಬ್ಬೇರಿಸಿದೆ.

    ಈ ಘಟನೆ ಕಳೆದ ಭಾನುವಾರ ಕ್ವಾಜುಲು ನಟಾಲ್‌ನ ಬಲ್ಲಿಟೊದಲ್ಲಿರುವ ಕ್ರೊಕೊಡೈಲ್ ಕ್ರೀಕ್ ಥೀಮ್ ಪಾರ್ಕ್ ನಡೆದಿದೆ. ಅನುಭವಿ ಮೊಸಳೆ ತಜ್ಞರೊಬ್ಬರು ಮೃಗಾಲಯಕ್ಕೆ ಭೇಟಿ ನೀಡಿದ ಅತಿಥಿಗಳಿಗೆ ಮೊಸಳೆ ಬಳಿ ನಿಂತು ಪ್ರದರ್ಶನ ನೀಡುತ್ತಿದ್ದರು. ಅವರ ಬಳಿ ದೈತ್ಯ ಗಾತ್ರದ ಎರಡು ಮೊಸಳೆಗಳು ಇರುವುದನ್ನು ವಿಡಿಯೋದಲ್ಲಿ ಗಮನಿಸಬಹುದು. ಕೋಲನ್ನು ಹಿಡಿದು ಮೊಸಳೆ ಮೈಯಿಗೆ ಚುಚ್ಚುವಾಗ ಆಕ್ರೋಶಗೊಂಡ ಮೊಸಳೆ ಸಿಬ್ಬಂದಿ ಮೇಲೆಯೇ ದಾಳಿ ಮಾಡಿತು.

    ಸಿಬ್ಬಂದಿಯ ಅದೃಷ್ಟ ಚೆನ್ನಾಗಿತ್ತು. ಮೊಸಳೆಯ ದವಡೆಗಳಿಗೆ ಸರಿಯಾಗಿ ಸಿಗದಿದ್ದರಿಂದ ಸ್ವಲ್ಪದರಲ್ಲೇ ಆತ ಬಚಾವ್​ ಆದನು. ಆ ಮೊಸಳೆಯು ನೈಲ್​ ಮೊಸಳೆಯಾಗಿದ್ದು, ವಿಶ್ವದ ಅತ್ಯಂತ ಶಕ್ತಿಶಾಲಿ ಮೊಸಳೆ ಜಾತಿಗಳಲ್ಲಿ ಇದು ದೊಡ್ಡದಾಗಿದೆ. ಮೊಸಳೆ, ಮೃಗಾಯಲದ ಸಿಬ್ಬಂದಿಯನ್ನು ಹಿಡಿದುಕೊಳ್ಳುತ್ತಿದ್ದಂತೆ ಪ್ರವಾಸಿಗರು ಸಹಾಯಕ್ಕಾಗಿ ಕೂಗಿಕೊಂಡರು. ಅಷ್ಟರಲ್ಲಿ ಮೊಸಳೆಯೇ ತನ್ನ ದವಡೆಯನ್ನು ಸಡಿಲಗೊಳಿಸಿದಾಗ ಸಿಬ್ಬಂದಿ ಅದರಿಂದ ಬಿಡಿಸಿಕೊಂಡು ಬಚಾವ್​ ಆಗಿದ್ದಾರೆ. ಕಾಲಿಗೆ ಮಾತ್ರ ಗಾಯಳಾಗಿವೆ.

    ಈ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ಪೋಸ್ಟ್​ ಮಾಡಿದ್ದಾರೆ. ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಹುಬ್ಬೇರಿಸಿದ್ದಾರೆ. ಜೂ ಕೀಪರ್​ ಅದೃಷ್ಟ ಚೆನ್ನಾಗಿತ್ತು ಎಂದು ಕಾಮೆಂಟ್​ ಮಾಡುತ್ತಿದ್ದಾರೆ. ಇನ್ನು ಕೆಲವರು ಪ್ರಾಣಿಗಳ ನಡುವೆ ಇಂತಹ ವರ್ತನೆ ಸರಿಯಲ್ಲ ಎಂದು ಜೂ ಕೀಪರ್​ ನಡೆಯನ್ನು ಖಂಡಿಸಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ತಿಳಿಸಿ. (ಏಜೆನ್ಸೀಸ್​)

    ಐಪಿಎಲ್​ ತಂಡಗಳಿಗೆ ಈ ಬೀಸ್ಟ್​ ಅಂದ್ರೆ ಭಯ! RCBಯ ಈ ಬಿರುಗಾಳಿಯನ್ನು ತಡೆಯುವವರು ಯಾರು?

    ಮುಂಬೈ ಇಂಡಿಯನ್ಸ್​ ನಾಯಕತ್ವದಿಂದ ರೋಹಿತ್​ ಶರ್ಮ ಕೆಳಗಿಳಿಯಲು ಸಚಿನ್​ ಕಾರಣ! ಇಲ್ಲಿದೆ ನೋಡಿ ಸಾಕ್ಷಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts