ರಸ್ತೆಯಲ್ಲಿ ಮೊಸಳೆ ಸಂಚಾರ..ಆತಂಕದಲ್ಲಿ ಜನ

crocodile
Published on

ತಿರುಪ್ಪೂರ್(ತಮಿಳುನಾಡು): ಜಿಲ್ಲೆಯ ಉಡುಮಲೈಪೇಟ್ ಬಳಿಯ ಕೊಲುಮಾಮಮ್ ಗ್ರಾಮದಲ್ಲಿ ಬುಧವಾರ ರಾತ್ರಿ ದೊಡ್ಡ ಮೊಸಳೆ ರಸ್ತೆಯಲ್ಲಿ ಸಂಚರಿಸಿದ ಪರಿಣಾಮ ಸ್ಥಳೀಯರು ಆತಂಕಗೊಂಡಿದ್ದರು.

ಕೊಲುಮಾಮಮ್ ಗ್ರಾಮದಲ್ಲಿ ದೊಡ್ಡ ಮೊಸಳೆ ರಸ್ತೆಯಲ್ಲಿ ಅಡ್ಡಾಡಿದೆ. ಇತ್ತೀಚೆಗೆ ನೀರಾವರಿ ಕಾಲುವೆಗಳ ಮೂಲಕ ಅಮರಾವತಿ ಜಲಾಶಯದ ನೀರಿಗೆ ಮೊಸಳೆಗಳು ಬಂದಿದ್ದು, ಬಳಿಕ ಜನವಸತಿ ಪ್ರದೇಶಗಳಲ್ಲಿ ಓಡಾಡುತ್ತಿವೆ ಎಂದು ಇಲ್ಲಿನ ನಿವಾಸಿಗಳು ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಕೊಲುಮಾಮಮ್ ಗ್ರಾಮದ ಚೆಕ್ ಪೋಸ್ಟ್ ಬಳಿಯ ರಸ್ತೆಯಲ್ಲಿ ಮೊಸಳೆ ಓಡಾಡುತ್ತಿರುವುದನ್ನು ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದರೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಮೊಸಳೆ ಹಿಡಿಯಲು ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net