ಹಳಿ ದಾಟುವಾಗ ಕಾರಿಗೆ ರೈಲು ಡಿಕ್ಕಿ: ಒಂದೇ ಕುಟುಂಬದ ಮೂವರ ದುರ್ಮರಣ

Train hots car
Published on

ಪಟನಾ: ಕಾರೊಂದಕ್ಕೆ ರೈಲು ಡಿಕ್ಕಿಯಾದ ಪರಿಣಾಮ ನಾಲ್ಕು ವರ್ಷದ ಬಾಲಕ ಸೇರಿ ಒಂದೇ ಕುಟುಂಬದ ಮೂವರು ಸಾವಿಗೀಡಾಗಿರುವ ಘಟನೆ ಬಿಹಾರದ ಪಟನಾ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

ಕಾರು ಪೊಟಾಹಿ ಮತ್ತು ನದ್ವಾನ್​ ನಡುವಿನ ರೈಲ್ವೇ ಹಳಿ ಕ್ರಾಸ್​ ಮಾಡುವಾಗ ಪಟನಾ-ರಾಂಚಿ ಜನ್​ಶತಾಬ್ದಿ ಸ್ಪೆಷನ್​ ಟ್ರೈನ್​ ಡಿಕ್ಕಿ ಹೊಡೆದಿದೆ. ಇಂದು ಬೆಳಗ್ಗೆ 6.35ರ ಸುಮಾರಿಗೆ ಘಟನೆ ನಡೆದಿದೆ ಎಂದು ಪೂರ್ವ ಕೇಂದ್ರ ರೈಲ್ವೆ ವಲಯದ ಸಿಪಿಆರ್​ಒ ರಾಜೇಶ್​ ಕುಮಾರ್​ ಮಾಹಿತಿ ನೀಡಿದ್ದಾರೆ.

ಇದು ಕಾರು ಚಾಲಕನ ಸಂಪೂರ್ಣ ನಿರ್ಲಕ್ಷ್ಯವಾಗಿದೆ. ಸಿಗ್ನಲ್​ ಇದ್ದರೂ ಅನಧಿಕೃತವಾಗಿ ಹಳಿ ಕ್ರಾಸ್​ ಮಾಡಲು ಯತ್ನಿಸಿದರು. ಗಯಾಗೆ ತೆರಳುತ್ತಿದ್ದ ರೈಲು ಇದೇ ವೇಳೆ ಡಿಕ್ಕಿ ಹೊಡೆದಿದೆ ಎಂದು ಕುಮಾರ್​ ಹೇಳಿದ್ದಾರೆ.

ಮೃತರನ್ನು ಸುಜಿತ್​ (32) ಪತ್ನಿ ನಿಲಿಮಾ (26) ಎಂದು ತಿಳಿದುಬಂದಿದೆ. ಮಗುವಿನ ಹೆಸರು ತಿಳಿದುಬರಬೇಕಿದೆ. ಇವರು ಪಟನಾ ನಗರದ ಆನಂದಪುರಿ ಏರಿಯಾದವರು ಎಂದು ಪನ್​ಪನ್​ ಪೊಲೀಸ್​ ಠಾಣೆಯ ಎಸ್​ಎಚ್​ಒ ಹೇಳಿದ್ದಾರೆ.

ಈ ಸಂಬಂಧ ದೂರು ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ವರದಿಗೆ ಕಳುಹಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net