ಸಂಜೆಯಾದರೂ ಅಂಗಡಿಗೆ ಬಾರದ ಮಾಲೀಕನ ಮನೆಗೆ ಹೋದ ಹಾಲಿನವ; ಮುಂದಾಗಿದ್ದು?

Crime
Published on

ಒಂದೇ ಕುಟುಂಬದ ಮೂವರ ಮೃತದೇಹ ಮನೆಯಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದೊಂದು ಕೊಲೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದ ಆಗ್ರಾದಲ್ಲಿ ಘಟನೆ ನಡೆದಿದೆ. ರಾಮ್​ವೀರ್​, ಅವರ ಪತ್ನಿ ಮೀರಾ ಮತ್ತು ಪುತ್ರ 22 ವರ್ಷದ ಬಬ್ಲೂ ಮೃತರು. ನಾಗ್ಲಾ ಕಿಶನಲ್​ ಲಾಲ್​ ನಲ್ಲಿರುವ ಅವರ ಮನೆಯಲ್ಲಿ ಮೂವರ ಶವವೂ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೀರಾ ಮತ್ತು ಬಬ್ಲೂ ಕೈಯನ್ನು ಹಿಂದಕ್ಕೆ ಕಟ್ಟಲಾಗಿದೆ..ಹಾಗೇ ರಾಮ್​ವೀರ್​ ಕುತ್ತಿಗೆಯಲ್ಲಿ ಉರುಲು ಕೂಡ ಕಂಡುಬಂದಿದೆ.

ಪ್ರಕರಣದ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಕುಟುಂಬಕ್ಕೆ ಯಾರೊಂದಿಗಾದರೂ ದ್ವೇಷವಿತ್ತಾ ಎಂಬಿತ್ಯಾದಿ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ. ಇದನ್ನೂ ಓದಿ: ವ್ಹೀಲಿಂಗ್​ ಮಾಡುತ್ತಿದ್ದ ಪುಂಡರಿಗೆ ಬೆಳ್ಳಂಬೆಳಗ್ಗೆ ಬಿಸಿ ಮುಟ್ಟಿಸಿದ ಪೊಲೀಸರು!

ರಾಮ್​ವೀರ್​ ಅಂಗಡಿಯಿಟ್ಟುಕೊಂಡಿದ್ದ. ಮಧ್ಯಾಹ್ನ ಊಟ ಮಾಡಿದ ನಂತರ ಸಂಜೆ 5 ಗಂಟೆಗೆ ಮತ್ತೆ ಅಂಗಡಿ ಬಾಗಿಲು ತೆರೆಯುತ್ತಿದ್ದ. ಆದರೆ ಸೋಮವಾರ 5 ಗಂಟೆ ಆದರೂ ಬರದೇ ಹೋದಾಗ ಹಾಲಿನವನು ಬಂದು ಮನೆ ಬಾಗಿಲು ತಟ್ಟಿದ್ದಾನೆ. ಎಷ್ಟೇ ಬಾಗಿಲು ಬಡಿದರೂ ಯಾರೂ ತೆಗೆಯದೆ ಇದ್ದಾಗ ಅನುಮಾನಗೊಂಡ ಆತ ಪೊಲೀಸರಿಗೆ ಕರೆ ಮಾಡಿದ್ದಾನೆ. ಇವರು ಮೂವರ ಶವಗಳು ಬೇರೆಬೇರೆ ಕೋಣೆಯಲ್ಲಿ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶೀಘ್ರವೇ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವುದಾಗಿ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net