

ಯೋಗಾಭ್ಯಾಸ, ಸ್ಟಂಟ್, ಜಿಮ್ನಾಸ್ಟಿಕ್...ವಿಡಿಯೋಗಳು ಇಂಟರ್ನೆಟ್ನಲ್ಲಿ ವೈರಲ್ ಆಗುವುದು ಹೊಸದಲ್ಲ. ಆದರೆ ಈ ಮಹಿಳೆ ಮಾಡಿದ ಸ್ಟಂಟ್ ನಿಜಕ್ಕೂ ನಿಮಗೆ ಅಪರೂಪ ಅನ್ನಿಸದೆ ಇರದು. ಹಾಗಂತ ಇವರೇನೂ ಅತಿದೊಡ್ಡ, ಕ್ಲಿಷ್ಟಕರ ಸಾಹಸ ಮಾಡಿಲ್ಲ.
ಹರಿಯಾಣದ ಮಹಿಳೆ ಒಂದು ಆಕ್ರೋಬ್ಯಾಟಿಕ್ ಜಿಮ್ನಾಸ್ಟಿಕ್ನ ಒಂದು ಸ್ಟಂಟ್ನ್ನು ಸೀರೆ ಉಟ್ಟುಕೊಂಡೇ ಮಾಡಿದ್ದಾರೆ. ಅದೆಷ್ಟು ಪರ್ಫೆಕ್ಟ್ ಆಗಿ ಮಾಡಿದ್ದಾರೆಂದರೆ..ವಿಡಿಯೋ ನೋಡಿದರೆ ನಿಮಗೂ ಅಚ್ಚರಿ, ಖುಷಿ ಆಗದೆ ಇರದು.
ಇವರು ಹರಿಯಾಣದ ಪಾರುಲ್ ಅರೋರಾ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಪಾರುಲ್ ಅರೋರಾ ರಾಷ್ಟ್ರಮಟ್ಟದ ಚಿನ್ನದ ಪದಕ ವಿಜೇತ ಜಿಮ್ನಾಸ್ಟ್.
ಆಗಸ್ಟ್ 30ರಂದು ವಿಡಿಯೋ ಪೋಸ್ಟ್ ಆಗಿದೆ. ನೆಟ್ಟಿಗರಂತೂ ಸಿಕ್ಕಾಪಟೆ ಹೊಗಳುತ್ತಿದ್ದಾರೆ. ಪಾರುಲ್ ನೀಲಿ ಸೀರೆಯುಟ್ಟಿದ್ದರೆ, ಅವರೊಂದಿಗೆ ಇರುವ ಯುವಕ ಸೂಟ್ ಧರಿಸಿದ್ದಾರೆ. ಇವರಿಬ್ಬರೂ ಮನೆಯ ಟೆರೇಸ್ ಮೇಲೆ ಮ್ಯಾಟ್ ಹಾಕಿ, ಅಲ್ಲಿಯೇ ಇವರಿಬ್ಬರೂ ಬ್ಯಾಕ್ ಲಿಫ್ಟ್ ಮಾಡಿದ್ದಾರೆ.
ಮೊದಲು ಇಬ್ಬರು ನಡೆದುಕೊಂಡು ಬರುತ್ತಾರೆ. ಒಮ್ಮೆಲೇ ಮ್ಯಾಟ್ನ ಮೇಲೆ ಜಿಮ್ನಾಸ್ಟಿಕ್ ಮಾಡಿದ್ದಾರೆ. ಪಾರೂಲ್ ಸೀರೆ ಉಟ್ಟಿದ್ದರೂ, ಬ್ಯಾಕ್ ಲಿಫ್ಟ್ ಮಾಡಿದ ಸರಿಯಾಗಿ ಅವರ ಕಾಲ ಮೇಲೆ ನಿಲ್ಲುತ್ತಾರೆ. ಹಾಗೇ ಮತ್ತೆ ತಮ್ಮ ಪಾರ್ಟನರ್ ಜತೆ ಕ್ಯಾಟ್ ವಾಕ್ ಮಾಡಿಕೊಂಡು ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋಕ್ಕೆ ಒಂದು ಕೋಟಿಗೂ ಅಧಿಕ ವೀವ್ಸ್ ಬಂದಿದೆ.
ಒಮ್ಮೆ ಈ ವಿಡಿಯೋವನ್ನು ನೀವೂ ನೋಡಿಕೊಂಡು ಬನ್ನಿ...