ಗ್ರಾಮಕ್ಕೆ ನುಗ್ಗಿ, ಬೆಳೆಗಳನ್ನೆಲ್ಲ ಸರ್ವನಾಶ ಮಾಡಿ, ಮೂವರನ್ನು ಸ್ಥಳದಲ್ಲೇ ಕೊಂದ ಕಾಡಾನೆ; ನಾಲ್ವರಿಗೆ ಗಂಭೀರ ಗಾಯ

Elephant 23 Feb 20
Published on

ಪುರಿ: ರೊಚ್ಚಿಗೆದ್ದ ಕಾಡಾನೆಯ ದಾಳಿಗೆ ಮೂವರು ಬಲಿಯಾಗಿದ್ದು, ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಒಡಿಶಾದ ಪುರಿ ಜಿಲ್ಲೆಯಲ್ಲಿ ನಡೆದಿದೆ.

ಪುರಿಯ ಗೋಪಿನಾಥ್​ಪುರ ಗ್ರಾಮವನ್ನು ಪೂರ್ತಿಯಾಗಿ ಕಾಡಾನೆ ವಿನಾಶ ಮಾಡಿದೆ. ಗಾಯಗೊಂಡ ನಾಲ್ವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ.

ಕಾಡಿನಿಂದ ಹೆದ್ದಾರಿಯನ್ನು ದಾಟಿ ಬಂದ ಆನೆ ಗೋಪಿನಾಥ್​ಪುರ ಹಾಗೂ ಸುತ್ತಲಿನ ಜನವಸತಿಪ್ರದೇಶಗಳಿಗೆ ನುಗ್ಗಿದೆ. ಆಹಾರ ಅರಸಿ ಬಂದ ಕಾಡಾನೆ ಸಿಕ್ಕಸಿಕ್ಕ ಬೆಳೆಗಳನ್ನೆಲ್ಲ ತುಳಿದಿದೆ. ಅದನ್ನು ಓಡಿಸಲು ಬಂದ ಮೂವರನ್ನು ಸ್ಥಳದಲ್ಲಿಯೇ ಕೊಂದು ಹಾಕಿದೆ.

ಆನೆ ಉಪಟಳಕ್ಕೆ ಹೆದರಿ ಸ್ಥಳೀಯರು ಅರಣ್ಯಾಧಿಕಾರಿಗಳು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆನೆಯನ್ನು ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿ ಹಗಲುಹೊತ್ತಿನಲ್ಲೂ ಆನೆಗಳು ಹಳ್ಳಿಗಳಿಗೆ ನುಗ್ಗುತ್ತಿವೆ ಎಂದು ವರದಿಯಾಗಿದೆ.

ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net