ಮಣಿಪುರದಲ್ಲಿ 3 ಬಾರಿ ಸರಣಿ ಭೂಕಂಪ: 5.2 ತೀವ್ರತೆಯ ದಾಖಲು | Earthquakes

dk - 2025-05-28T183908.653
Published on

Earthquakes: ಮಣಿಪುರದಲ್ಲಿ ಬುಧವಾರ ಮೂರು ಬಾರಿ ಸರಣಿ ಭೂಕಂಪ ಸಂಭವಿಸಿದ್ದು, ಅವುಗಳಲ್ಲಿ 5.2 ತೀವ್ರತೆಯ ಭೂಕಂಪ ಅತ್ಯಂತ ಪ್ರಬಲವಾಗಿದೆ ಎಂದು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಹೇಳಿದೆ.

ಚುರಚಂದ್‌ಪುರ ಜಿಲ್ಲೆಯಲ್ಲಿ ಬೆಳಗಿನ ಜಾವ 1.54 ಕ್ಕೆ 5.2 ತೀವ್ರತೆಯ ಭೂಕಂಪ ಸಂಭವಿಸಿದೆ. ನೋನಿ ಜಿಲ್ಲೆಯಲ್ಲಿ ಬೆಳಗ್ಗೆ 2.26ಕ್ಕೆ 2.5 ತೀವ್ರತೆಯ ಎರಡನೇ ಭೂಕಂಪ ಸಂಭವಿಸಿದೆ, ಬೆಳಗ್ಗೆ 10.23ಕ್ಕೆ ಚುರಚಂದ್‌ಪುರದಲ್ಲಿ 3.9 ತೀವ್ರತೆಯ ಮೂರನೇ ಭೂಕಂಪ ಸಂಭವಿಸಿದೆ ಎಂದು ತಿಳಿಸಿದೆ.

ಇಲ್ಲಿಯವರೆಗೆ ಯಾವುದೇ ಸಾವುನೋವು ಅಥವಾ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net