

ರಾಯಚೂರು ಸರ್ಕಾರ ಶಿಕ್ಷಣ ಇಲಾಖೆಗೆ ಪ್ರತಿ ವರ್ಷ ಸಾಕಷ್ಟು ಅನುದಾನ ಜಾರಿ ಮಾಡಲಾಗುತ್ತಿದೆಂದು ಹೇಳಲಾಗುತ್ತಿದೆ ಆದರೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧೀನದ ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಗೋಡೆಗಳು ಮುಂಗಾರು ಪೂರ್ವ ಜೋರು ಮಳೆಗೆ ಒದ್ದೆಯಾಗಿದ್ದು, ಮೇಲ್ಚಾವಣಿ ತೊಟ್ಟಿಕ್ಕುತ್ತಿದೆ. ಕಾಲೇಜು ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು ಅಲ್ಲಲ್ಲಿ ಮೇಲ್ಚಾವಣಿ ಸಿಮೆಂಟ್ ಪದರು ಕುಸಿದು ಬಿದ್ದಿದ್ದರು, ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗದೆ ಇರುವುದು ಶೋಚಾನಿಯ ಸಂಗತಿಯಾಗಿದೆ.
ಸುಮಾರು 30 ವರ್ಷದ ಹಳೆಯ ಕಟ್ಟಡ ಇದಾಗಿದ್ದು, ಜೋರು ಮಳೆ ಬಂದಾಗಲೆಲ್ಲಾ ಕಾಲೇಜಿನ ಸುಮಾರು ಕೊಠಡಿಗಳು ತೊಟ್ಟಿಕ್ಕುತ್ತವೆ. ಕಟ್ಟಡಗಳ ದುರಸ್ತಿ ಹಾಗೂ ಹೊಸ ಕೊಠಡಿಗಳ ನಿರ್ಮಾಣವಾದರೆ ಮಾತ್ರ ವಿದ್ಯಾರ್ಥಿಗಳು, ಉಪನ್ಯಾಸಕರು ನೆಮ್ಮದಿಯಿಂದ ಕಾಲೇಜಿಗೆ ಬರಬಹುದು. ಇಲ್ಲದಿದ್ದರೇ ಜೀವ ಭಯದಲ್ಲಿ ಇರುವಂತ ಸ್ಥಿತಿ ನಿರ್ಮಾಣವಾಗಿದೆ.
ಎಷ್ಟು ಕೊಠಡಿಗಳು ಸೋರುತ್ತಿವೆ.
ಕಾಲೇಜಿನ ಕಟ್ಡಡವು ಸುಮಾರು 30 ವರ್ಷದ ಹಳೆಯ ಕಟ್ಟಡವಾಗಿದ್ದು, ಒಟ್ಟು ಒಂಭತ್ತು ಕೊಠಡಿಗಳಲ್ಲಿ ಸುಮಾರು 04 ರಿಂದ 05 ಕೊಠಡಿಗಳು ಮಳೆ ಬಂದಾಗಲೆಲ್ಲಾ ಸೋರುತ್ತಿವೆ. ಈಗಾಗಲೇ ಅಲ್ಲಲ್ಲಿ ಮೇಲ್ಚಾವಣಿ ಕುಸಿದು ಬಿದ್ದಿದೆ. ತರಗತಿ ಕೋಣೆಗಳು, ಉಪನ್ಯಾಸಕರ ಕೊಠಡಿಯಲ್ಲಿ ಎಲ್ಲೆಂದರಲ್ಲಿ ಮೇಲ್ಚಾವಣಿ ಪದರು ಕುಸಿದಿದ್ದು ಜೀವ ಭಯ ಹುಟ್ಟಿಸುವಂತ ಪರಸ್ಥಿತಿ ನಿರ್ಮಾಣವಾಗಿದೆ. ಪ್ರತಿ ವರ್ಷ ಕಲಾ,ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಸುಮಾರು 400 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಆದರೆ ಮಳೆ ಬಂದರೆ ಮಾತ್ರ ವಿದ್ಯಾರ್ಥಿ ಹಾಗೂ ಉಪನ್ಯಾಸಕರಿಗೆ ಭಯ ಹುಟ್ಟಿಸುತ್ತಿದೆ.
ದಾಖಲಾತಿಗೆ ಪಾಲಕರ ಹಿಂದೇಟು
ಇತ್ತಿಚ್ಚಿನ ದಿನಗಳಲ್ಲಿ ಸರ್ಕಾರಿ ಕಾಲೇಜಿನಲ್ಲಿ ದಾಖಲಾತಿ ಕಡಿಮೆಯಾಗುತ್ತಿರುವುದರಿಂದ ಈ ಬಾರಿ ಪ್ರಥಮ ಪಿಯುಸಿ ತರಗತಿಗೆ ಮಕ್ಕಳ ಸಂಖ್ಯೆ ಹೆಚ್ಚಿಸಲು ಉಪನ್ಯಾಸಕರು ಅಭಿಯಾನ ಪ್ರಾರಂಭ ಮಾಡಿದ್ದು, ಆದರೆ ಶಿಥಿಲಗೊಂಡ ಕಟ್ಟಡವನ್ನು ನೋಡಿ ಮಕ್ಕಳನ್ನು ಬಿಡಲು ಪಾಲಕರು ಹಿಂದೇಟು ಹಾಕುತ್ತಿದ್ದು, ಇದರಿಂದ ಅಭಿಯಾನ ಮೂಲಕ ಮನವಿ ಮಾಡಿದರು ಯಾವುದೇ ಕ್ರಮವಾಗುತ್ತಿಲ್ಲವೆಂದು ಉಪನ್ಯಾಸಕರು ಆಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಜೀವ ಹಾನಿಯಾದರೆ ಹೊಣೆ ಯಾರು?
ಶಿಥಿಲಗೊಂಡಿರುವ ಕಟ್ಟಡ ಕುಸಿದುಬಿದ್ದರೆ ತರಗರಿಗೆ ತೀವ್ರ ತೊಂದರೆಯಾಗುವುದರ ಜತಗೆ ಗೋಡೆಯ ಬಿರುಕು ಹೆಚ್ಚಾದ ಕಾರಣದಿಂದ ಇದೀಗ ಬದಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆದರೆ ವಿದ್ಯಾರ್ಥಿಗಳು ಓಡಾಡುತ್ತಿರುವ ಪ್ರದೇಶವಾಗಿರುವುದರಿಂದ ಕಟ್ಟಡ ಕುಸಿದರೆ ಜೀವಹಾನಿಯಾಗುವ ಆತಂಕವೂ ಇದೆ. ಕಟ್ಟಡ ದುರಸ್ತಿಗೊಳಿಸುವ ಸ್ಥಿತಿಯಲ್ಲಿಯೂ ಇಲ್ಲ. ಆದರೆ ಪದೇ ಪದೇ ಸರ್ಕಾರಕ್ಕೆ ಮಾನವಿ ಮಾಡಿದರೂ ಸಂಬಂದಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ವಿದ್ಯಾರ್ಥಿಗಳ ಹೆತ್ತವರ ಆರೋಪವಾಗಿದೆ. ಮೊದಲೇ ತರಗತಿ ಕೊಠಡಿಗಳ ಸಮಸ್ಯೆ ಎದುರಿಸುತ್ತಿರುವ ಕಾಲೇಜಿನಲ್ಲಿ ಇರುವ ಕಟ್ಟಡವು ಕುಸಿದುಬೀಳಲು ಸಿದ್ದವಾಗಿರುವುದರಿಂದ ಸರ್ಕಾರ ಬೇಗ ಪರಿಹಾರ ಸೂಚಿಸಬೇಕೇಂದು ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಒತ್ತಾಯ ಮಾಡುತ್ತಿದ್ದಾರೆ.
ಸುಮಾರು 30 ವರ್ಷದ ಕಟ್ಟಡವಾಗಿರುವುದರಿಂದ ಪದವಿ ಪೂರ್ವ ಕಾಲೇಜಿನ ಕೊಠಡಿಗಳು ಮಳೆ ಬಂದಾಗ ಸೋರುತ್ತದೆ ಆದರಿಂದ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದೇವೆ. ಕಟ್ಟಡ ರಿಪೇರಿ ಹಾಗೂ ಹೊಸ ಕೊಠಡಿಗಳ ಅಗತ್ಯತೆ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಕೊಟ್ರ ಬಸಪ್ಪ .ಕೆ ಉಪ ನಿರ್ದೇಶಕ ಪದವಿ ಪೂರ್ವ ಶಿಕ್ಷಣ ಇಲಾಖೆ ರಾಯಚೂರು