ಪಟಾಕಿ ಸಿಡಿಸುವ ವೇಳೆ Cylinder Blast; ಮೂವರು ಮಕ್ಕಳು ಸಾವು

Fire Accident
Published on

ಹೌರಾ: ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದ್ದು, ವರ್ಷ ಕಳೆದಂತೆ ಪಟಾಕಿಯಿಂದ ಸಂಭವಿಸುವ ಅವಘಡಗಳು ಹೆಚ್ಚುತ್ತಿದ್ದು, ಇದೀಗ ಮನೆಯೊಂದರಲ್ಲಿ ಪಟಾಕಿ ಜತೆಗೆ ಸಿಲಿಂಡರ್​ ಸ್ಫೋಟಗೊಂಡು (Cylinder Blast) ಮೂವರು ಮಕ್ಕಳು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಪಶ್ಚಿಮ ಬಂಗಾಳದ ಹೌರಾದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ತಾನಿಯಾ ಮಿಸ್ತ್ರಿ (14), ಇಶಾನ್ ಧಾರಾ (6) ಮತ್ತು ಮುಮ್ತಾಜ್ ಖತುನ್ (8) ಎಂದು ಗುರುತಿಸಲಾಗಿದೆ. 

ಈ ಕುರಿತು ಮಾತನಾಡಿರುವ ಅಗ್ನಿಶಾಮಕ ಅಧಿಕಾರಿ ರಂಜನ್ ಕುಮಾರ್ ಘೋಷ್, ಮಕ್ಕಳು ತಮ್ಮ ಮನೆಯ ಬಾಲ್ಕನಿಯಲ್ಲಿ ಪಟಾಕಿ ಹೊಡೆಯುತ್ತಿದ್ದ ವೇಳೆ ಕಿಡಿ ತಗುಲಿ ಅಲ್ಲೇ ಪಕ್ಕದಲ್ಲಿ ಇರಿಸಲಾಗಿದ್ದ, ಪಟಾಕಿಗಳು ಹೊತ್ತಿಕೊಂಡಿದೆ. ಪಟಾಕಿಯ ಜೊತೆಗೆ ಸಿಲಿಂಡರ್​ ಕೂಡ ಸ್ಫೋಟಗೊಂಡ (Cylinder Blast) ಪರಿಣಾಮ ದುರ್ಘಟನೆ ಸಂಭವಿಸಿದೆ.

ಅವಘಡ ಸಂಭವಿಸಿದ ಬಗ್ಗೆ ಮಾಹಿತಿ ಪಡೆದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ (FireFighters) ಎರಡು ವಾಹನಗಳಲ್ಲಿ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಅಷ್ಟರಲ್ಲಾಗಲೇ ಬೆಂಕಿ ಕೆನ್ನಾಲಿಗೆಗೆ ಮೂವರು ಮಕ್ಕಳು ಸಜೀವ ದಹನವಾಗಿದ್ದರು. ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಅಗ್ನಿಶಾಮಕ ಅಧಿಕಾರಿ ರಂಜನ್ ಕುಮಾರ್ ಘೋಷ್ ತಿಳಿಸಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ

ಅಗ್ನಿ ಅವಘಡದಲ್ಲಿ ಮೂವರು ಮಕ್ಕಳು ಸಾವನ್ನಪ್ಪಿದ ಹೊರತಾಗಿಯೂ ಆ ಸಂದರ್ಭದಲ್ಲಿ ಅಗ್ನಿಶಾಮಕ ಸಿಬ್ಬಂದಿ ನಡೆಸಿದ ಕಾರ್ಯಾಚರಣೆ ಬಗ್ಗೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಗ್ನಿಶಾಮಕ ದಳದವರು ತಮ್ಮ ಕೆಲಸವನ್ನ ಪರಿಣಾಮಕಾರಿಯಾಗಿ ಮಾಡದೇ ಇದ್ದಿದ್ದರೆ ಘಟನೆಯಲ್ಲಿ ಹೆಚ್ಚಿನ ಮನೆಗಳು ಸುಟ್ಟುಹೋಗುವ ಸಾಧ್ಯತೆಯಿತ್ತು ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net