3.01 ಕೋಟಿ ರೂ. ನಿವ್ವಳ ಲಾಭ

3.01 ಕೋಟಿ ರೂ. ನಿವ್ವಳ ಲಾಭ
Published on

ಕೆ.ಆರ್.ನಗರ: ನವ ನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ 3.01 ಕೋಟಿ ರೂ. ನಿವ್ವಳ ಲಾಭಗಳಿಸಿದ್ದು, ಬ್ಯಾಂಕ್‌ನ ಸದಸ್ಯರಿಗೆ ಇನ್ನಷ್ಟು ಉತ್ತಮ ಸೇವೆ ನೀಡುವ ದೃಷ್ಟಿಯಿಂದ ವ್ಯವಹಾರವನ್ನು ಇನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ನವನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಹೇಳಿದರು.

ಪಟ್ಟಣದ ಆರ್‌ಆರ್‌ಆರ್ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ನಡೆದ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ಯಾಂಕ್‌ಗೆ ಬಂದ ಲಾಭದಲ್ಲಿ ಷೇರುದಾರ ಸದಸ್ಯರಿಗೆ ಆರ್‌ಬಿಐ ಆದೇಶದ ಮೇರೆಗೆ ಶೇ.10 ರಷ್ಟು ಡಿವಿಡೆಂಟ್ ಪಾವತಿಸಲು ಸ್ವ-ಇಚ್ಚೆಯಿಂದ ಬ್ಯಾಂಕ್ ಘೋಷಣೆ ಮಾಡಿದೆ.

ಗ್ರಾಹಕರು ಉಳಿತಾಯ ಖಾತೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಸಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಎರಡು ವರ್ಷಕ್ಕೊಮ್ಮೆ ಕೆವೈಸಿ ಮಾಡಿಸಿಕೊಳ್ಳುವ ಮೂಲಕ ಖಾತೆದಾರರಿಗೆ ಅನುಕೂಲ ಮಾಡಲಾಗುತ್ತದೆ ಎಂದು ಹೇಳಿದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಹಾಗೂ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ ಎಂದು ವಿವರಿಸಿದರು.

ಮುಂದಿನ ಸಾಲಿಗೆ 5ಕೋಟಿ ರೂ. ನಿವ್ವಳ ಲಾಭ ಗಳಿಸುವ ಉದ್ದೇಶ ಹೊಂದಿದ್ದು, 4ನೇ ಎಟಿಎಂ ಮಷಿನ್ ಅನ್ನು ಪಿರಿಯಾಪಟ್ಟಣದಲ್ಲಿ ಪ್ರಾರಂಭಿಸುವ ಉದ್ದೇಶ ಹೊಂದಲಾಗಿದೆ. ಅಲ್ಲದೆ ಗ್ರಾಹಕರ ಅನುಕೂಲಕ್ಕಾಗಿ ಮೊಬೈಲ್ ಬ್ಯಾಂಕಿಂಗ್ ಸೇವೆ ನೀಡುತ್ತಿದೆ ಎಂದು ವಿವರಿಸಿದರು.

ನವನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷರಾದ ಸರೋಜಾನಾರಾಯಣ್, ನಿರ್ದೇಶಕರಾದ ರಶ್ಮಿ ದಿನೇಶ್, ಕೇಶವ್, ವಿಜಯಕುಮಾರ್, ಎಂ.ಕೆ.ಮಹದೇವ್, ಚಂದ್ರಕುಮಾರ್, ಎಸ್.ಮಹದೇವಯ್ಯ, ಅಪ್ಸರ್‌ಬಾಬು, ವೈ.ಎಸ್.ಕುಮಾರ್, ಚಂದ್ರಶೇಖರ್, ಸುಬ್ಬನಾಯಕ, ರಮೇಶ್‌ರಾವ್, ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಸುರೇಶ್, ವ್ಯವಸ್ಥಾಪಕ ಚನ್ನಕೇಶವ, ಮಂಚನಾಯಕ, ಎ.ವಿ.ಮಂಜುನಾಥ್, ಕೆ.ಎಸ್.ಪ್ರಮೋದ್, ಎಂ.ಪಿ.ಸುಹಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net