ಅಮೆರಿಕದಲ್ಲಿ 2ನೇ ಹಂತದ ಗಡಿಪಾರು ಪ್ರಕ್ರಿಯೆ ಆರಂಭ; ಇಂದು ಅಮೃತಸರದಲ್ಲಿ ಇಳಿಯಲಿರುವ ಎರಡನೇ ವಿಮಾನ

US Flight
Published on

ನವದೆಹಲಿ: ಅಮೆರಿಕದಲ್ಲಿ ನೆಲೆಸಿರುವ ಭಾರತೀಯರ ವಲಸಿಗರ ಎರಡನೇ ಹಂತದ ಗಡಿಪಾರು ಪ್ರಕ್ರಿಯೆ ಪ್ರಾರಂಭವಾಗಿದ್ದು, 119 ಮಂದಿ ಅಕ್ರಮ ವಲಸಿಗರನ್ನು ಹೊತ್ತಿರುವ ಅಮೆರಿಕದ ವಿಮಾನ ಶನಿವಾರ ಪಂಜಾಬ್‌ನ ಅಮೃತಸರಕ್ಕೆ ಬಂದಿಳಿಯಲಿದೆ. 119 ಮಂದಿ ಪೈಕಿ 67 ಜನರು ಪಂಜಾಬ್​ ಮೂಲದವರು ಎಂದು ತಿಳಿದು ಬಂದಿದೆ.

ಈಗ ಬರುತ್ತಿರುವ ಅಕ್ರಮ ವಲಸಿಗರ ಪೈಕಿ 67 ಮಂದಿ ಪಂಜಾಬ್‌ನವರೇ ಆಗಿದ್ದಾರೆ. ಹರಿಯಾಣದಿಂದ 33, ಗುಜರಾತ್​ನಿಂದ 08, ಉತ್ತರಪ್ರದೇಶದ 03, ರಾಜಸ್ಥಾನ ಮತ್ತು ಮಹಾರಾಷ್ಟ್ರದಿಂದ ತಲಾ ಒಬ್ಬ ವ್ಯಕ್ತಿಗಳು ಗಡಿಪಾರಾಗಿದ್ದಾರೆ. ಮೂರನೇ ವಿಮಾನವು ಫೆಬ್ರವರಿ 16ರಂದು ಹೊರಡುವ ಸಾಧ್ಯತೆಯಿದೆ.

ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸದಲ್ಲಿರುವಾಗಲೇ ಗಡಿಪಾರು ಪ್ರಕ್ರಿಯೆಯನ್ನು ಮುಂದುವರಿಸಿದೆ. ಇತ್ತೀಚೆಗಷ್ಟೇ 104 ಮಂದಿ ಭಾರತೀಯ ಅಕ್ರಮ ವಲಸಿಗರನ್ನು ಅಮೆರಿಕದಿಂದ ಭಾರತಕ್ಕೆ ಕಳುಹಿಸಲಾಗಿತ್ತು. ಈ ವೇಳೆ ಜನರ ಕೈಗೆ ಕೋಳಗಳನ್ನು ತೊಡಿಸಿ ಕರೆತಂದಿದ್ದ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net