ಯುಜಿಸಿಇಟಿ/ನೀಟ್: 2ನೇ ಸುತ್ತಿನ ಫಲಿತಾಂಶ ಒಂದು ವಿಳಂಬ

KEA new
Published on

ಬೆಂಗಳೂರು: 

ವೈದ್ಯಕೀಯ, ಇಂಜಿನಿಯರಿಂಗ್ ಸೇರಿ ವೃತ್ತಿಪರ ಕೋರ್ಸ್‌ಗಳ ಎರಡನೇ ಸುತ್ತಿನ ಪ್ರವೇಶ ಪ್ರಕ್ರಿಯೆ ಬುಧವಾರದಿಂದ ಆರಂಭವಾಗಿದೆ. ಲಭ್ಯ ಸೀಟುಗಳ ವಿವರಗಳನ್ನು ಕೂಡ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಗಳು ಗುರುವಾರದಿಂದ (ಆ.21) ಇಚ್ಛೆ/ಆಯ್ಕೆಗಳನ್ನು ಬದಲಿಸುವ/ತೆಗೆಯಬಹುದಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.

ಆಯ್ಕೆಗಳನ್ನು ಬದಲಾಯಿಸಲು ಆ.25ರವರೆಗೆ ಅವಕಾಶ ನೀಡಲಾಗಿದೆ. ಆ.29ರಂದು ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

ಆರ್ಯುವೇದ ಕೋರ್ಸ್‌ಗಳ ಸೀಟ್ ಮ್ಯಾಟ್ರಿಕ್ಸ್ ಕೂಡ ಪ್ರಕಟಿಸಿದೆ. ಮೊದಲ ಸುತ್ತಿನಲ್ಲಿ ಚಾಯ್ಸ್- 2 ಹಾಗೂ 3 ಆಯ್ಕೆ ಮಾಡಿದವರಿಗೂ ಆಯುರ್ವೇದ ಕೋರ್ಸ್‌ಗಳ ಪ್ರವೇಶಕ್ಕೆ ಆಯ್ಕೆಗಳನ್ನು ದಾಖಲಿಸಲು ಅವಕಾಶವಿದೆ ಎಂದು ಮಾಹಿತಿ ನೀಡಿದ್ದಾರೆ.

ಇದುವರೆಗೂ ಸೀಟು ಹಂಚಿಕೆಯಾಗದಿರುವವರು ಈ ಸುತ್ತಿನಲ್ಲಿ ಭಾಗವಹಿಸಬೇಕಿದ್ದರೆ ಕಡ್ಡಾಯವಾಗಿ ಲಾಗಿನ್ ಆಗಿ ಸೀಟಿನ ಅಗತ್ಯವನ್ನು ಖಾತರಿಪಡಿಸಲು ಒಪ್ಪಿಗೆಯ (ಐ ಅಗ್ರೀ) ಬಟನ್ ಒತ್ತಬೇಕು. ಪ್ರಕ್ರಿಯೆಯಲ್ಲಿ ಭಾಗವಹಿಸದವರನ್ನು ಮುಂದಿನ ಸುತ್ತಿಗೆ ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಒಂದು ದಿನ ತಡವಾಗಿ ಲಿತಾಂಶ

ಎಂಸಿಸಿ ವತಿಯಿಂದ ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಣೆ ನಂತರ ಆಲ್ ಇಂಡಿಯಾ ಕೋಟಾ ಅಥವಾ ಬೇರೆ ರಾಜ್ಯದಲ್ಲಿ ಸೀಟು ಸಿಕ್ಕಿ, ಅಲ್ಲಿಗೆ ಹೋಗಲು ಆಸಕ್ತಿ ಇರುವವರಿಗೆ ಯಾವುದೇ ದಂಡ ಇಲ್ಲದೆ ಹೊರಗೆ ಹೋಗಲು ಈ ಹಂತದಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ. ಎಂಸಿಸಿ ಫಲಿತಾಂಶ ಪ್ರಕಟಣೆಯಾದ ಒಂದು ದಿನ ಅವಕಾಶ ಕೊಟ್ಟು ಹೊರ ಹೋಗುವವರನ್ನು ನೋಡಿಕೊಂಡು, ಒಂದು ದಿನ ತಡವಾಗಿ ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಇದು ಈ ಬಾರಿಯ ವಿಶೇಷ ಎಂದು ಅವರು ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net