ಕರ್ನಾಟಕದ ಪಿಯುಸಿ ಟಾಪರ್ಸ್​ ಲಿಸ್ಟ್

WhatsApp Image 2020-07-14 at 3.03.29 PM
Published on

ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಒಟ್ಟು ಶೇ.69.20 ಫಲಿತಾಂಶ ದಾಖಲಾಗಿದ್ದು, 6,75,277 ಮಂದಿ ಪೈಕಿ 4, 17, 297 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಈ ಪೈಕಿ ವಿಭಾಗವಾರು ಅಂದರೆ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಟಾಪರ್ಸ್​​ ಲಿಸ್ಟ್ ಅನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದ್ದು, ಟಾಪ್​ 3 ಬಂದವರ ವಿವರ ಇಲ್ಲಿದೆ.

ವಿಜ್ಞಾನ ವಿಭಾಗ: ವಿಜ್ಞಾನದಲ್ಲಿ ಉಡುಪಿಯ ವಿದ್ಯೋದಯ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಭಿಜ್ಞಾ ರಾವ್​ ಮತ್ತು ಬೆಂಗಳೂರಿನ ವಿದ್ಯಾಮಂದಿರ ಸ್ವತಂತ್ರ ಪಿಯು ಕಾಲೇಜಿನ ವಿದ್ಯಾರ್ಥಿನಿ ಎಂ.ಎನ್​.ಪ್ರೇರಣಾ 596 ಅಂಕಗಳಿಸುವ ಮೂಲಕ ಇಬ್ಬರೂ ರಾಜ್ಯಕ್ಕೆ ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ. 595 ಅಂಕ ಪಡೆದ ಬೆಂಗಳೂರಿನ ಆರ್‌ವಿ ಪಿಯು ಕಾಲೇಜಿನ ಆಕಾಂಕ್ಷ ಪೈ ದ್ವತೀಯ ಸ್ಥಾನ ಗಳಿಸಿದ್ದಾರೆ. 594 ಅಂಕವನ್ನು ನಾಲ್ವರು ಪಡೆದಿದ್ದು, 3ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಅವರ ವಿವರ ಇಲ್ಲಿದೆ. ಯಶಸ್ ಎಂ.ಎಸ್.- ಗೋಪಾಲಸ್ವಾಮಿ ಎಸ್‍ವಿ ಪಿಯು ಕಾಲೇಜು, ಮೈಸೂರು. ಶಿಫಾಲಿ ಎಂ.ಎಸ್.- ಎಬಿಸಿ ಪಿಯು ಕಾಲೇಜು, ಬೆಂಗಳೂರು. ಅಖಿಲಾ ಯು. ಹೆಗ್ಡೆ- ಸರ್ಕಾರಿ ಪಿಯು ಕಾಲೇಜು, ಶಿವಮೊಗ್ಗ, ಆಲ್ಮಾಸ್ ಬಾನು- ಜ್ಞಾನಭಾರತಿ ಪಿಯು ಕಾಲೇಜು,  ತುಮಕೂರು.

ವಾಣಿಜ್ಯ ವಿಭಾಗ: ಟಿಸಿಎಸ್ ಅರವಿಂದ್ ಶ್ರೀವಾತ್ಸವ್(ಪ್ರಥಮ)- ವಿದ್ಯಾಮಂದಿರ ಇಂಡಿಪೆಂಡೆಂಟ್ ಪಿಯು ಕಾಲೇಜು, ಮಲ್ಲೇಶ್ವರ. ಬೃಂದಾ ಜೆ.ಎನ್.(ದ್ವಿತೀಯ)- ಎಜಿಎಸ್ ಗರ್ಲ್ಸ್ ಪಿಯು ಕಾಲೇಜು, ಮೈಸೂರು. ಸಿಂಧು ಜಿ.ಎಂ. (ತೃತೀಯ)- ಸರ್ಕಾರಿ ಪಿಯು ಕಾಲೇಜು, ಸಾಗರ. ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

ಕಲಾ ವಿಭಾಗ: ಕರಿಗೌಡ ದಾಸನಗೌಡ್ರ(ಪ್ರಥಮ)- ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜು, ಬಳ್ಳಾರಿ. ಸ್ವಾಮಿ ಆರ್‌.ಎಂ.(ದ್ವಿತೀಯ)- ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜು, ಬಳ್ಳಾರಿ. ಮೊಹಮ್ಮದ್ ರಫೀಕ್ ಎಚ್.(ತೃತೀಯ)- ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜು, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net