

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯನ್ನು ನೀಡಿದೆ. ಈ ಹಿಂದೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯನ್ನು ಮೇ 22 ರಿಂದ ಜೂನ್ 2ರವರೆಗೆ ನಡೆಸಲು ಮಂಡಳಿ ತೀರ್ಮಾನಿಸಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತು.
ಆದರೆ CET ಪರೀಕ್ಷೆ ಆರಂಭವಾದ ಹಿನ್ನಲೆಯಲ್ಲಿ, ಮೇ 22ರಿಂದ ಆರಂಭವಾಗಬೇಕಿದ್ದ ಪೂರಕ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪರೀಕ್ಷಾ ಮಂಡಳಿಯು ನೂತನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮೇ 23 ರಿಂದ ಜೂನ್ 2ರವರೆಗೆ ಪರೀಕ್ಷೆಗಳು ನಡೆಯಲಿವೆ. ಈ ಪರಿಷ್ಕೃತ ವೇಳಾಪಟ್ಟಿಯನ್ನು https://kseab.karnataka.gov.in ರಲ್ಲಿ ಪ್ರಕಟಿಸಲಾಗಿದೆ.
ಮೇ 23ರಂದು ಕನ್ನಡ ಮತ್ತು ಅರೇಬಿಕ್, 24ರಂದು ಐಚ್ಚಿಕ ಕನ್ನಡ, ರಸಾಯನಶಾಸ್ತ್ರ ಮತ್ತು ಮೂಲಗಣಿತ, 25ರಂದು ಇಂಗ್ಲೀಷ್, 26ರಂದು ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ ಮತ್ತು ಗಣಕ ವಿಜ್ಞಾನ, 27ರಂದು ಇತಿಹಾಸ ಮತ್ತು ಸಂಖ್ಯಾಶಾಸ್ತ್ರ, 29ರಂದು ಹಿಂದಿ, 30ರಂದು ಭೂಗೋಳಶಾಸ್ತ್ರ, ಮನಃಶಾಸ್ತ್ರ ಹಾಗೂ ಭೌತಶಾಸ್ತ್ರ, 31ರಂದು ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಶಿಕ್ಷಣಶಾಸ್ತ್ರ ಮತ್ತು ಗೃಹ ವಿಜ್ಞಾನ ನಡೆಯಲಿವೆ.
ಜೂನ್ 1ರಂದು ರಾಜ್ಯಶಾಸ್ತ್ರ ಮತ್ತು ಗಣಿತಶಾಸ್ತ್ರ, 2ರಂದು ತರ್ಕಶಾಸ್ತ್ರ, ಹಿಂದೂಸ್ತಾನಿ ಸಂಗೀತ ಮತ್ತು ವ್ಯವಹಾರ ಅಧ್ಯಯನ , 03ರಂದು ಅರ್ಥಶಾಸ್ತ್ರ ಹಾಗೂ ಜೀವಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.(ಏಜೆನ್ಸೀಸ್)