ದ್ವಿತೀಯ ಪಿಯುಪರೀಕ್ಷೆ: ಶುಲ್ಕ ಪಾವತಿಗೆ ಡಿ.23 ಕೊನೇ ದಿನ

mysore
Published on

ಬೆಂಗಳೂರು ದ್ವಿತೀಯ ಪಿಯುಸಿ ಮೊದಲ ವಾರ್ಷಿಕ ಪರೀಕ್ಷೆಗೆ ಖಾಸಗಿ ಅಭ್ಯರ್ಥಿಗಳು ಶುಲ್ಕ ಭರಿಸುವ ಅವಧಿಯನ್ನು ಡಿ.23ರ ವರೆಗೆ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ವಿಸ್ತರಿಸಿದೆ.

ಅಭ್ಯರ್ಥಿಗಳು ಕಾಲೇಜಿಗೆ ದಂಡ ಸಹಿತಾ ಪರೀಕ್ಷಾ ಶುಲ್ಕವನ್ನು ಪಾವತಿಸಲು ಡಿ.23 ಕೊನೆಯ ದಿನ ಮತ್ತು ಅವಕಾಶವಾಗಿದೆ. ಕಾಲೇಜಿನ ಪ್ರಾಂಶುಪಾರು ಪರೀಕ್ಷಾ ಶುಲ್ಕವನ್ನು ಖಜಾನೆಗೆ ಸಂದಾಯ ಮಾಡುವ ಮತ್ತು ಅಭ್ಯರ್ಥಿಗಳ ಅರ್ಜಿಯನ್ನು ಪಿಯು ಮಂಡಳಿಯ ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡುವ ಅವಧಿಯನ್ನು ಡಿ.26ರ ವರೆಗೆ ವಿಸ್ತರಿಸಲಾಗಿದೆ.

ಈ ಮೊದಲು ಡಿ.12ರ ವರೆಗೆ ದಂಡ ಸಹಿತ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಪಾಲಕರು ಮತ್ತು ವಿದ್ಯಾರ್ಥಿಗಳ ಮನವಿ ಮೇರೆಗೆ ಸಮಯ ವಿಸ್ತರಿಸಲಾಗಿದೆ. ಇದೇ ಕೊನೆಯ ಅವಕಾಶವಾಗಿದೆ ಎಂದು ಮಂಡಲಿ ನಿರ್ದೇಶಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net