

ಕಳಸ: ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ೆ.28ರಿಂದ ಮಾ.4ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ. ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯುವ ಜಾತ್ರಾ ಮಹೋತ್ಸವದಲ್ಲಿ ೆ.28ರಂದು ರಥೋತ್ಸವಾಂಗ ಶ್ರೀ ಗಣಪತಿ ಪೂಜೆ, ಮಹಾಗಣಪತಿ ಹೋಮ ಮತ್ತು ರಾತ್ರಿ ಮಹಾರಂಗಪೂಜೆ ನಡೆಯಲಿದೆ. ಮಾ.1ರಂದು ಮಧ್ಯಾಹ್ನ ಧ್ವಜಾರೋಹಣ, ರಾತ್ರಿ ಪುಷ್ಪಕಾರೋಹಣ, 2ರಂದು ಮಧ್ಯಾಹ್ನ 12.34ಕ್ಕೆ ಬ್ರಹ್ಮರಥೋತ್ಸವ, ರಾತ್ರಿ 10ಕ್ಕೆ ಮಹಾರಥೋತ್ಸವ ನಡೆಯಲಿದೆ. 3ರಂದು ಕುಂಕುಮೋತ್ಸವ, ಅವಭೃತ ಸ್ನಾನ, ರಾತ್ರಿ ಇಡಿಗಾಯಿ ಸೇವೆ, ಧ್ವಜಾವರೋಹಣ, 4ರಂದು ಸಂಪ್ರೋಕ್ಷಣೆಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ ಎಂದು ತಿಳಿಸಿದ್ದಾರೆ.