ಒಂದು ನಿಂಬೆಹಣ್ಣಿಗೆ 1.4 ಲಕ್ಷ ರೂ.; ಈ ನಿಂಬೆ ಬಳಸಲೂ ಸಾಧ್ಯವೇ ಇಲ್ಲ..ಆದ್ರೂ ತುಂಬಾ ಸ್ಪೆಷಲ್!

285 year old lemon fetches a whopping Rs 1.4 lakh at auction in UK
Published on

ನವದೆಹಲಿ: ಅಪರೂಪದ ಮತ್ತು ಐತಿಹಾಸಿಕ ವಸ್ತುಗಳನ್ನು ಖರೀದಿಸಲು ಕೆಲವರು ಆಸಕ್ತಿ ತೋರಿಸುತ್ತಾರೆ.  ಪುರಾತನ ಕಲಾಕೃತಿಗಳು ಮತ್ತು ವಜ್ರಗಳನ್ನು ಮಾತ್ರ ಖರೀದಿ ಮಾಡಿರುವ  ಸುದ್ದಿಗಳು ನೆಟ್ ನಲ್ಲಿ ನಿರಂತರವಾಗಿ ಹರಿದಾಡುತ್ತಿರುತ್ತವೆ. ಸಾಮಾನ್ಯವಾಗಿ ನಿಂಬೆ ಹಣ್ಣಿಗೆ ಸೀಸನ್ ನಲ್ಲಿ ಐದು ರೂಪಾಯಿ ಬೆಲೆ ಇದ್ದರೂ ಸಾಮಾನ್ಯ ದಿನಗಳಲ್ಲಿ ಎರಡರಿಂದ ಮೂರು ರೂಪಾಯಿಗೆ ಸಿಗುತ್ತದೆ.  ಆದರೆ ಇಲ್ಲೊಂದು ನೆಂಬೆಹಣ್ಣು ಲಕ್ಷ ರೂಪಾಯಿಗೆ ಮಾರಾಟವಾಗಿದೆ.

ಇಂಗ್ಲೆಂಡಿನಲ್ಲಿ ನಿಂಬೆ ಹಣ್ಣಿಗೆ ರೂ. 1.4 ಲಕ್ಷಕ್ಕೆ ಮಾರಾಟವಾಗಿದೆ. ಆದರೆ ಈ ನಿಂಬೆ ಬಳಸಲೂ ಆಗಲ್ಲ ಆದರೆ ತುಂಬಾ ಸ್ಪೆಷಲ್. ಏಕೆಂದರೆ  ಇದು ಕೊಳೆತ ಹಳೆಯ ನಿಂಬೆ. ಈ ನಿಂಬೆ ಸುಮಾರು 285 ವರ್ಷಗಳಿಂದಲೂ ಇದೆ. ಇದರ ಇತಿಹಾಸ ತಿಳಿದರೆ ಬೆಚ್ಚಿ ಬೀಳುತ್ತೀರಿ.

ಈ ಕೊಳೆತ ನಿಂಬೆ 19 ನೇ ಶತಮಾನದಷ್ಟು ಹಿಂದಿನದು. ಇಂಗ್ಲೆಂಡಿನ ಕುಟುಂಬವೊಂದು ಅವರ ಮನೆಯಲ್ಲಿ ಹಳೆಯ ವಸ್ತುವನ್ನು ಕಂಡುಹಿಡಿದಿದೆ. ಅದೇನು ಎಂದು ನೋಡಿದಾಗ ಅದು ನಿಂಬೆಹಣ್ಣು ಎಂದು ತಿಳಿಯಿತು. ಇದಲ್ಲದೆ, ಈ ನಿಂಬೆ ಶ್ರೀಮಂತ ಇತಿಹಾಸವನ್ನು ಹೊಂದಿದೆ.

ನಿಂಬೆ ಒಣಗಿದ್ದು, ಕಂದು ಬಣ್ಣದಲ್ಲಿ ಕಾಣುತ್ತದೆ. ಇದರ ಮೇಲೆ ಸಂದೇಶವೂ ಕಾಣಿಸುತ್ತದೆ. ಅದರ ಪ್ರಕಾರ.. ಈ ನಿಂಬೆಹಣ್ಣಿನದ್ದು 1739ನೇ ಇಸವಿಯೆಂದು ತೋರುತ್ತದೆ. ನಿಂಬೆಹಣ್ಣು ಸಂದೇಶವನ್ನು ಹೊಂದಿದೆ “ಮಿಸ್ ಇ. ಬ್ಯಾಕ್ಸ್ಟರ್‌ಗೆ ಮಿಸ್ಟರ್ ಪಿ. ಲ್ಯೂ ಫ್ರಾಂಚಿನಿ ಅವರು ನವೆಂಬರ್ 3, 1739 ರಂದು ಉಡುಗೊರೆಯಾಗಿ ನೀಡಿದ್ದಾರೆ. ಆಗ ನಿಂಬೆಹಣ್ಣು ಅವರ ಆಸ್ತಿಯಾಗಲಿದೆ ಎಂದು ತಿಳಿದುಕೊಂಡವರು.

ಬ್ರೆಟೆಲ್ ಹರಾಜು ಹೌಸ್ ಮಾಲೀಕ ಡೇವಿಡ್ ಬ್ರೆಟೆಲ್ ಈ ನಿಂಬೆ ಹಣ್ಣನ್ನು ಹರಾಜಿಗೆ ಇಟ್ಟಿದ್ದು, ಅದನ್ನು ಯಾರು ಖರೀದಿಸುತ್ತಾರೆ? ಆದರೆ ಹಲವರನ್ನು ಅಚ್ಚರಿಗೊಳಿಸುವಂತೆ  2024 ಜನವರಿ 31ರಂದು ಶತಮಾನದಷ್ಟು ಹಳೆಯದಾದ ಈ ನಿಂಬೆಹಣ್ಣು $1,780 (ನಮ್ಮ ದೇಶದ ಕರೆನ್ಸಿಯಲ್ಲಿ ಸುಮಾರು 1.4 ಲಕ್ಷ ರೂ.) ಗೆ ಮಾರಾಟವಾಯಿತು. ಬ್ರೆಟಲ್ಸ್ ಹರಾಜು ಹೌಸ್ ಇದನ್ನು ಸಾಮಾಜಿಕ ಮಾಧ್ಯಮದ ಮೂಲಕ ಬಹಿರಂಗಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net