3 ವರ್ಷಗಳಲ್ಲಿ 2,775% ಲಾಭ: ಬೋನಸ್​ ನೀಡಲು ಸಜ್ಜಾಗಿದೆ ಈ ಪೆನ್ನಿ ಸ್ಟಾಕ್​!

penny
Published on

multibagger penny stock; scrip hit 10 per cent upper circuit on January 08

Return,Penny,Stock,Bonus,share,market

ಮುಂಬೈ:

ಈ ಷೇರು ಕೇವಲ 2 ವರ್ಷಗಳಲ್ಲಿ 720 ಪ್ರತಿಶತದಷ್ಟು ಆದಾಯ ಗಳಿಸಿಕೊಟ್ಟಿದೆ. ಅಲ್ಲದೆ, 3 ವರ್ಷಗಳಲ್ಲಿ ಶೇಕಡಾ 2,775ರಷ್ಟು ಲಾಭ ನೀಡಿದೆ.

ವಿಮಾ ದೈತ್ಯ ಕಂಪನಿ ಎಲ್ಐಸಿ ಬೆಂಬಲದೊಂದಿಗೆ ಎಫ್‌ಎಂಸಿಜಿ ವಲಯದ ಪೆನ್ನಿ ಸ್ಟಾಕ್ (ಕಡಿಮೆ ಮೊತ್ತದ ಚಿಕ್ಕ ಷೇರು) ಇದಾಗಿದೆ. ಕೇವಲ 8 ದಿನಗಳಲ್ಲಿ 60 ಪ್ರತಿಶತದಷ್ಟು ಹೆಚ್ಚಳವನ್ನು ಕಂಡಿದೆ.

ಸೋಮವಾರ ಒಟ್ಟಾರೆ ಮಾರುಕಟ್ಟೆ ಕುಸಿತದ ಹೊರತಾಗಿಯೂ, ಈ ಅನಿರೀಕ್ಷಿತ ಲಾಭವು ದಿನದ ವ್ಯಾಪಾರ ಚಟುವಟಿಕೆಗಳಿಗೆ ಉತ್ಸಾಹದ ಸ್ಪರ್ಶವನ್ನು ನೀಡಿತು.

ಷೇರುದಾರರಿಗೆ ಬಹುಮಾನ ನೀಡುವ ಕ್ರಮವಾಗಿ ಕಂಪನಿಯು ಉದಾರವಾದ 1: 1 ಬೋನಸ್ ಷೇರು ವಿತರಣೆಯನ್ನು ಘೋಷಿಸಿದೆ, ಪ್ರತಿ ಅರ್ಹ ಷೇರುದಾರರಿಗೆ 2024 ರ ಜನವರಿ 11 ರಂದು ಬೋನಸ್​ ಷೇರು ನೀಡಲಾಗುತ್ತಿದ್ದು, ಈ ಮೂರು ಅವರ ಷೇರುಗಳು ದುಪ್ಪಟ್ಟಾಗಲಿವೆ.

ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ಹೆಸರು ಇಂಟೆಗ್ರಾ ಎಸೆನ್ಷಿಯಾ ಲಿಮಿಟೆಡ್ (Integra Essentia Ltd).

ಈ ಕಂಪನಿಯು 538.38 ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳದೊಂದಿಗೆ ಜೀವನ ಅಗತ್ಯ ವಸ್ತುಗಳ (ಆಹಾರ, ಬಟ್ಟೆ, ಮೂಲಸೌಕರ್ಯ ಮತ್ತು ಇಂಧನ) ಉತ್ಪನ್ನಗಳನ್ನು ಒದಗಿಸುವ ಕಂಪನಿಯಾಗಿದೆ. ಬ್ರೂಟಸ್ ಬೆವರೆಜಸ್​ನಲ್ಲಿ ಬಹುಪಾಲು ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಭರವಸೆಯ ಬಿಯರ್ ಮತ್ತು ವಿಸ್ಕಿ ಮಾರುಕಟ್ಟೆಯನ್ನು ವ್ಯೂಹಾತ್ಮಕವಾಗಿ ಪ್ರವೇಶಿಸಿದೆ.

ಕಂಪನಿಯ ಕ್ರೋಢೀಕೃತ ಆರ್ಥಿಕ ಕಾರ್ಯಕ್ಷಮತೆಯು ಹಿಂದಿನ ಹಣಕಾಸು ವರ್ಷದ ಇದೇ ಅವಧಿಗಳಿಗೆ ಹೋಲಿಸಿದರೆ ಗಣನೀಯವಾಗಿ ಸುಧಾರಿಸಿದೆ. ಈಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು ಶೇಕಡಾ 17.11 ಮತ್ತು ಮೊದಲಾರ್ಧ ವರ್ಷದಲ್ಲಿ ಶೇಕಡಾ 7.79 ರಷ್ಟು ಹೆಚ್ಚಾಗಿದೆ.

ಈ ಷೇರು ಕೇವಲ 2 ವರ್ಷಗಳಲ್ಲಿ 720 ಪ್ರತಿಶತದಷ್ಟು ಮತ್ತು 3 ವರ್ಷಗಳಲ್ಲಿ ಶೇಕಡಾ 2,775 ಆದಾಯವನ್ನು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net