More

    ಜಗತ್ತಿನ ಪ್ರಮುಖ ಐಟಿ ಕಂಪನಿ ಟಿಸಿಎಸ್​ನಲ್ಲಿದ್ದಾರೆ 6 ಲಕ್ಷಕ್ಕೂ ಅಧಿಕ ಉದ್ಯೋಗಿಗಳು…

    ಮುಂಬೈ: ರತನ್ ಟಾಟಾ ಅವರು ಭಾರತದ ಪ್ರಸಿದ್ಧ ಕೈಗಾರಿಕೋದ್ಯಮಿ, ಲೋಕೋಪಕಾರಿ ಮತ್ತು ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷರಾಗಿದ್ದಾರೆ. ಅವರು ಅಧ್ಯಕ್ಷರಾಗಿದ್ದಾಗ ಹಲವಾರು ಟಾಟಾ ಕಂಪನಿಗಳನ್ನು ಮುನ್ನಡೆಸಿದರು. ಹಲವಾರು ಟಾಟಾ ಕಂಪನಿಗಳು ತಮ್ಮ ಉತ್ಪನ್ನಗಳು ಮತ್ತು ಸೇವೆಗಳಿಗೆ ಹೆಸರುವಾಸಿಯಾಗಿವೆ. ಗೂಗಲ್, ಮೈಕ್ರೋಸಾಫ್ಟ್, ಟೆಸ್ಲಾ ಸೇರಿದಂತೆ ಜಾಗತಿಕ ಕಂಪನಿಗಳಿಗೆ ಅವರು ಸ್ಥಾಪಿಸಿದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಐಟಿ ಕಂಪನಿ ಕಠಿಣ ಸ್ಪರ್ಧೆಯನ್ನು ನೀಡುತ್ತದೆ. ಉದ್ಯೋಗ ನೀಡುವಲ್ಲಿಯೂ ಇದು ಇತರ ಕಂಪನಿಗಳಿಗಿಂತ ಮುಂದಿದೆ.

    ಉದ್ಯೋಗಿಗಳ ವಿಷಯದಲ್ಲಿ ವಿಶ್ವದ ಅಗ್ರ 10 ಕಂಪನಿಗಳಲ್ಲಿ ಟಿಸಿಎಸ್​ ಸೇರಿದೆ. ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ಡೇಟಾ ಪ್ರಕಾರ, 614,795 ಉದ್ಯೋಗಿಗಳು ಟಿಸಿಎಸ್​ನಲ್ಲಿ ಕೆಲಸ ಮಾಡುತ್ತಾರೆ. ಮಾರುಕಟ್ಟೆ ಬಂಡವಾಳದ ವಿಷಯದಲ್ಲಿ ಟಿಸಿಎಸ್​ ಭಾರತದಲ್ಲಿ ಎರಡನೇ ಅತಿ ದೊಡ್ಡ ಕಂಪನಿಯಾಗಿದೆ. ಜನವರಿ 5 ರ ಹೊತ್ತಿಗೆ ಈ ಕಂಪನಿಯು 13,52,000 ಕೋಟಿ ರೂ. ಮಾರುಕಟ್ಟಿ ಬಂಡವಾಳ ಹೊಂದಿದ್ದು, ಇದೇ ದಿನಾಂಕದಂದು ಈ ಕಂಪನಿಯ ಷೇರು 3,738.60 ರೂಪಾಯಿ ಆಗಿತ್ತು.

    ಜಾಗತಿಕವಾಗಿ ಉದ್ಯೋಗಿಗಳ ವಿಷಯದಲ್ಲಿ ಟಿಸಿಎಸ್​ಗಿಂತ ಐದು ಕಂಪನಿಗಳು ಮಾತ್ರ ಮುಂದಿವೆ. ಅಮೆರಿಕದ ವಾಲ್‌ಮಾರ್ಟ್ ಮತ್ತು ಅಮೆಜಾನ್‌ಗಳು ಕ್ರಮವಾಗಿ 21 ಲಕ್ಷ ಮತ್ತು 15.41 ಉದ್ಯೋಗಿಗಳನ್ನು ಹೊಂದಿವೆ. ತೈವಾನ್​ ಕಂಪನಿ ಫಾಕ್ಸ್‌ಕಾನ್ 8,26,608 ಉದ್ಯೋಗಿಗಳನ್ನು ಹೊಂದಿದೆ. ಅಸೆಂಟ್‌ನಲ್ಲಿ ಉದ್ಯೋಗಿಗಳ ಸಂಖ್ಯೆ 7.33 ಲಕ್ಷ. ವೋಕ್ಸ್‌ವ್ಯಾಗನ್‌ನಲ್ಲಿ 7,33,000 ಉದ್ಯೋಗಿಗಳು ಕೆಲಸ ಮಾಡುತ್ತಾರೆ. ಟಿಸಿಎಸ್​ 614,795 ಉದ್ಯೋಗಿಗಳೊಂದಿಗೆ 6 ನೇ ಸ್ಥಾನದಲ್ಲಿದೆ.

    ಉದ್ಯೋಗಿಗಳ ವಿಷಯದಲ್ಲಿ ಟಾಪ್ 100 ಕಂಪನಿಗಳ ಪಟ್ಟಿಯಲ್ಲಿ ಟಿಸಿಎಸ್​ ಜತೆಗೆ ಇನ್ಫೋಸಿಸ್, ಮಹೀಂದ್ರ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಸಹ ಸೇರಿವೆ. ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ಡೇಟಾ ಪ್ರಕಾರ, ಇನ್ಫೋಸಿಸ್ 3,28,764 ಮತ್ತು ಮಹೀಂದ್ರಾ 2.60 ಲಕ್ಷ ಉದ್ಯೋಗಿಗಳನ್ನು ಹೊಂದಿದೆ. 2,36,334 ಉದ್ಯೋಗಿಗಳು ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

    ಗುಜರಾತ್ ಶೃಂಗಸಭೆಗೂ ಮುನ್ನ ಅಹಮದಾಬಾದ್‌ನಲ್ಲಿ ಯುಎಇ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ರೋಡ್‌ ಶೋ

    ಸಲಿಂಗಕಾಮಿ ಸಚಿವ ಗೇಬ್ರಿಯಲ್ ಅಟ್ಟಲ್: ಫ್ರಾನ್ಸ್​ ಪ್ರಧಾನಿಯಾಗಿ ನೇಮಕ

    ಷೇರು ಸೂಚ್ಯಂಕ ಅಲ್ಪ ಏರಿಕೆ: ಲಾಭ- ನಷ್ಟ ಅನುಭವಿಸಿದ ಷೇರುಗಳು ಯಾವವು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts